ಪೊಲೀಸ್ ಕಸ್ಟಡಿ ಪ್ರಶ್ನಿಸಿ ಮುಹಮ್ಮದ್ ಝುಬೈರ್ ಸಲ್ಲಿಸಿದ ಅರ್ಜಿ ನಾಳೆ ವಿಚಾರಣೆ

Update: 2022-06-30 10:47 GMT
Photo: Twitter/@ANI

 ಹೊಸದಿಲ್ಲಿ: ತಾವು 2018ರಲ್ಲಿ ಮಾಡಿದ ಟ್ವೀಟ್‍ಗೆ ಸಂಬಂಧಿಸಿದಂತೆ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ ಆರೋಪ ಹೊರಿಸಿ ತಮ್ಮನ್ನು ಬಂಧಿಸಿ ಪೊಲೀಸ್ ಕಸ್ಟಡಿಯಲ್ಲಿರಿಸಿರುವುದನ್ನು ಪ್ರಶ್ನಿಸಿ ಆಲ್ಟ್ ನ್ಯೂಸ್  ಸಹಸ್ಥಾಪಕ ಮುಹಮ್ಮದ್ ಝುಬೈರ್ ಅವರು ಸಲ್ಲಿಸಿರುವ ಅರ್ಜಿಯನ್ನು ಶುಕ್ರವಾರ ವಿಚಾರಣೆಗೆ ಕೈಗೆತ್ತಿಕೊಳ್ಳಲು ದಿಲ್ಲಿ ಹೈಕೋರ್ಟ್ ಒಪ್ಪಿದೆ ಎಂದು ಝುಬೈರ್ ಅವರ ವಕೀಲರು ತಿಳಿಸಿದ್ದಾರೆ.

ಝಬೈರ್ ಅವರು ವಿಚಾರಣೆಗೆ ಸಹಕರಿಸುತ್ತಿಲ್ಲ ಹಾಗೂ ಅವರ ಫೋನ್/ ಲ್ಯಾಪ್‍ಟಾಪ್ ವಶಪಡಿಸಿಕೊಳ್ಳಲು ಅವರನ್ನು ಅವರ ಬೆಂಗಳೂರಿನ ನಿವಾಸಕ್ಕೆ ಕರೆದೊಯ್ಯಬೇಕಿದೆ ಎಂದು ದಿಲ್ಲಿ ಪೊಲೀಸರು ಹೇಳಿದ ಕಾರಣ ಜೂನ್ 28ರಂದು ಮುಖ್ಯ ಮೆಟ್ರೋಪಾಲಿಟನ್ ನ್ಯಾಯಾಲಯವು ಝುಬೈರ್ ಅವರನ್ನು ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ವಹಿಸಿತ್ತು.

ಇಂದು ಝುಬೈರ್ ಪರ ವಕೀಲೆ ವೃಂದಾ ಗ್ರೋವರ್ ಅವರು ಸಲ್ಲಿಸಿದ ಅರ್ಜಿ ನಾಳೆ ವಿಚಾರಣೆಗೆ ಬರಲಿದೆ. ಝುಬೈರ್ ಅವರು ಯಾವುದೇ ಚಿತ್ರವನ್ನು ತಿರುಚಿ ಪೋಸ್ಟ್ ಮಾಡಿಲ್ಲ ಬದಲು ಹಿಂದಿ ಸಿನೆಮಾ ಒಂದರ ಸ್ಟಿಲ್ ಚಿತ್ರ ಬಳಸಿದ್ದರು ಹಾಗೂ ಅದಕ್ಕಾಗಿ ಅವರನ್ನು ಬಂಧಿಸಿರುವುದು ಅಸಂಬದ್ಧ ಎಂದು ಅವರ ವಕೀಲರು ವಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News