×
Ad

ಪಾವೂರು, ಬೋಳಿಯಾರ್: ಹಲವು ಕಡೆ ಮಳೆ ಹಾನಿ

Update: 2022-06-30 19:43 IST

ಮಂಗಳೂರು: ಉಳ್ಳಾಲ ತಾಲೂಕಿನ ಪಾವೂರು ಮತ್ತು ಬೋಳಿಯಾರ್ ಗ್ರಾಮದ ಹಲವು ಕಡೆ ಗುರುವಾರ ಮಳೆ ಹಾನಿ ಸಂಭವಿಸಿದ್ದು, ಭಾರೀ ನಷ್ಟವುಂಟಾಗಿದೆ.

ಮಲಾರ್ ಇಸ್ಲಾಹಿ ನಗರದ ಅಬೂಬಕರ್ ಸಿದ್ದೀಕ್ ಮಸೀದಿಯ ಆವರಣದ ತಡೆಗೋಡೆ ಕುಸಿದಿದೆ. ಅಲ್ಲದೆ ಮಲಾರ್ ಕೆರೆಬಳಿ ಹಾಗೂ ಇನೋಳಿ ಪಾಂಚರಪ್ಪಾಲ್‌ ನಲ್ಲೂ ಗುಡ್ಡ ಕುಸಿದಿದೆ.

ಇನೋಳಿಯಲ್ಲಿ ಮನೆಯೊಳಗೆ ನುಗ್ಗಿದ ನೀರನ್ನು ಹೊರತೆಗೆಯುತ್ತಿದ್ದ ವೇಳೆ ಸಿದ್ದೀಕ್ ಎಂಬವರ ತಲೆಗೆ ಕಲ್ಲು ಬಿದ್ದು ಗಾಯವಾಗಿದೆ. ಇನೋಳಿ ವರಂತೋಟ ಮುಖ್ಯರಸ್ತೆ, ಮಲಾರ್ ಟಿಪ್ಪು ನಗರದಲ್ಲೂ ಕೂಡ ಗುಡ್ಡ ಕುಸಿದು ರಸ್ತೆಗೆ ಬಿದ್ದಿದೆ. ಇದರಿಂದ ವಾಹನ ಮತ್ತು ಜನರ ಸುಗಮ ಸಂಚಾರಕ್ಕೆ ತೊಂದರೆಯಾಗಿದೆ. ಪಡ್ಡಾಯಿಯಲ್ಲಿ ಗುಡ್ಡ ಕುಸಿದು ಎರಡು ಮನೆಗಳಿಗೆ ಹಾನಿಯಾಗಿವೆ. ಪಂಜಿಲದಲ್ಲೂ ಕೂಡ ಆವರಣ ಗೋಡೆ ಕುಸಿದಿದೆ. ತೋಡಬರಿ ಎಂಬಲ್ಲಿ ಶ್ರೀನಿವಾಸ್ ಎಂಬವರ ಮನೆ ಹಿಂಭಾಗದ ಗುಡ್ಡ ಕುಸಿದ ಪರಿಣಾಮ ಮನೆಯೊಳಗೆ ಕೆಸರು ಮಣ್ಣು ತುಂಬಿವೆ. ಕಲ್ಲಕಂಡ, ಕಾನ, ಉಗ್ಗನಬೈಲ್‌ನಲ್ಲೂ ತೋಟಕ್ಕೆ ನೀರು ನುಗ್ಗಿ ಅಪಾರ ಕೃಷಿ ಹಾನಿಯಾಗಿದೆ. ಅರಬ್ಬೀ ತೋಟದಲ್ಲಿ ಎರಡು ಕಂಬಗಳು ಬಿದ್ದು, ವಿದ್ಯುತ್ ವ್ಯತ್ಯಯವಾಗಿದೆ.

ಬೋಳಿಯಾರ್ ಗ್ರಾಮದ ಜಾರಗುಡ್ಡದಲ್ಲಿ ಗುಡ್ಡ ಕುಸಿದು ರಫೀಕ್ ಎಂಬವರ ಮನೆಗೆ ಹಾನಿಯಾಗಿದೆ. ಪಲ್ಲ, ಜಾರದಗುಡ್ಡ, ಮಜಿ ದೇವಸ್ಥಾನ. ಮದಕ ಮತ್ತಿತರ ಕಡೆಯಲ್ಲೂ ಆವರಣ ಗೋಡೆ ಕುಸಿದಿದೆ. ರಂತಡ್ಕ, ಮಜಿ ಆರೋಗ್ಯ ಉಪ ಕೇಂದ್ರದ ಬಳಿ, ಚೇಳೂರು, ಅಮ್ಮೆಮ್ಮಾರ್ ರಸ್ತೆ ಬಳಿ, ಧರ್ಮನಗರ, ಕೋಟೆ ರಸ್ತೆ ಬಳಿಯಲ್ಲೂ ಗುಡ್ಡ ಕುಸಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News