ಆಸ್ಕರ್‌ ಸಮಿತಿ ಸೂರ್ಯಗೆ ಆಹ್ವಾನ: ಈ ಗೌರವ ಲಭಿಸಿದ ದಕ್ಷಿಣ ಭಾರತದ ಮೊದಲ ನಟ

Update: 2022-08-13 09:25 GMT
Editor : Saleeth Sufiyan
ಸೂರ್ಯ (Photo: Twitter/@Suriya_offl)

ಚೆನ್ನೈ: ಆಸ್ಕರ್ ಸಂಘಟಕರ ಸದಸ್ಯತ್ವ ಸಮಿತಿಗೆ ತಮಿಳು ನಟ ಸೂರ್ಯ ಅವರನ್ನು ಆಹ್ವಾನಿಸಲಾಗಿದೆ. ಭಾರತದಿಂದ ಹಿಂದಿ ನಟಿ ಕಾಜೊಲ್‌ ಹಾಗೂ ನಿರ್ದೇಶಕಿ ರೀಮಾ ಕಾಗ್ತಿ ಅವರನ್ನೂ ಆಹ್ವಾನಿಸಲಾಗಿದೆ. ಆಸ್ಕರ್‌ ಸಮಿತಿಗೆ ಆಹ್ವಾನ ಪಡೆಯುತ್ತಿರುವ ದಕ್ಷಿಣ ಭಾರತದ ಮೊದಲ ನಟ ಸೂರ್ಯ ಆಗಿದ್ದಾರೆ. 

ಮಂಗಳವಾರ, ದಿ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ 397 ಕಲಾವಿದರನ್ನು ʼಕ್ಲಾಸ್‌ ಆಫ್‌  2022ʼ ರ ಭಾಗವಾಗಲು ಆಹ್ವಾನಿಸಿದೆ. ಅದರಲ್ಲಿ ಸೂರ್ಯ, ಕಾಜೊಲ್‌, ಕಾಗ್ತಿ ಸೇರಿದ್ದಾರೆ. 

ತಮಿಳು ನಟ ಸೂರ್ಯ ಅವರು ತಮ್ಮ ಅಭಿನಯದ ಮೂಲಕವೇ ಭಾರತೀಯ ಸಿನೆಮಾ ರಂಗದಲ್ಲಿ ಛಾಪು ಮೂಡಿಸಿದವರು. ರಾಮ್‌ಗೋಪಾಲ್‌ ವರ್ಮಾ ಅವರ ʼರಕ್ತ ಚರಿತ-2ʼ ಚಿತ್ರದಲ್ಲಿ ಸೂರ್ಯ ನಟನೆಯು ವಿಮರ್ಷಕರ ಗಮನವನ್ನು ಸೆಳೆದಿತ್ತು. ಕಳೆದ ಎರಡು ವರ್ಷಗಳಲ್ಲಿ ಓಟಿಟಿ ಮೂಲಕ ಬಿಡುಗಡೆಯಾದ ಅವರ ಎರಡು ಚಿತ್ರಗಳು ವ್ಯಾಪಕ ಯಶಸ್ಸನ್ನು ಪಡೆದಿದೆ.

ಸುಧಾ ಕೊಂಗರ ನಿರ್ದೇಶನದ 'ಸೂರೆರೈಪೋಟ್ರುʼ ಹಾಗೂ ಟಿಜೆ ಗ್ಯಾನವೇಲ್‌ ನಿರ್ದೇಶನದ ʼಜೈ ಭೀಮ್‌ʼ ಓಟಿಟಿಯಲ್ಲಿ ಬಿಡುಗಡೆಗೊಂಡಿದ್ದು, ಡಿಜಿಟಲ್‌ ಮಾಧ್ಯಮದ ಮೂಲಕ ಸೂರ್ಯ ಅವರಿಗೆ ಹೊಸ ಅಭಿಮಾನಿಗಳನ್ನು ಸೃಷ್ಟಿಸಿಕೊಟ್ಟಿತ್ತು. ಅವರ ಸಿನೆಮಾ ವ್ಯಾಪ್ತಿಯನ್ನು ಅವರು ಆ ಮೂಲಕ ಹಿಗ್ಗಿಸಿಕೊಂಡಿದ್ದರು.

ಅದರಲ್ಲೂ, ಇತ್ತೀಚೆಗೆ ತೆರೆಕಂಡ ಕಮಲ್‌ ಅಭಿನಯದ 'ವಿಕ್ರಮ್‌' ಚಿತ್ರದ ಕೊನೆಯ ಕೆಲವು ನಿಮಿಷಗಳಲ್ಲಿ ಸೂರ್ಯ ಕಾಣಿಸಿಕೊಂಡಿದ್ದು, ರೋಲೆಕ್ಸ್‌ ಎಂಬ ನೆಗೆಟಿವ್‌ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಪಾತ್ರದ ವಿನ್ಯಾಸವು ಸೂರ್ಯ ಅವರು ಇದುವರೆಗೂ ಕಾಣಿಸದಂತಹ ರೀತಿಯಲ್ಲಿ ಬಿಂಬಿಸಿದೆ.

Writer - Saleeth Sufiyan

contributor

Editor - Saleeth Sufiyan

contributor

Similar News