ವಾಣಿಜ್ಯ ಬಳಕೆಯ ಎಲ್‌ಪಿಜಿ ದರದಲ್ಲಿ 200 ರೂ.ಕಡಿತ

Update: 2022-07-01 17:26 GMT

ಹೊಸದಿಲ್ಲಿ,ಜು.1: ಸರಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪೆನಿಗಳು ಬುಧವಾರ 19 ಕೆ.ಜಿ. ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 200 ರೂ.ನಷ್ಟು ಕಡಿತಗೊಳಿಸಿದೆ. ನೂತನ ದರ ಪರಿಷ್ಕರಣೆಯು ಜುಲೈ 1ರಿಂದಲೇ ಜಾರಿಗೆ ಬರಲಿದೆ.

ರಾಜಧಾನಿ ದಿಲ್ಲಿಯಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ 198 ರೂ. ಕಡಿತವಾಗಿದ್ದು, ಅದರ ಬೆಲೆ 2021 ರೂ. ಆಗಲಿದೆ. ಇದಕ್ಕೂ ಮೊದಲು ಅಲ್ಲಿ 19 ಕೆ.ಜಿ.ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 2219 ರೂ. ಆಗಿತ್ತು.

ನೂತನ ದರಕಡಿತದೊಂಗಿದಿಗೆ 19 ಕೆ.ಜಿ. ವಾಣಿಜ್ಯ ಬಳಕೆಯ ಸಿಲಿಂಡರ್ ದರ ಕೋಲ್ಕತಾದಲ್ಲಿ 2140 ರೂ. ಹಾಗೂ ಮುಂಬೈನಲ್ಲಿ 1981 ರೂ. ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News