ಇಂದಿನಿಂದ ದೇಶದಲ್ಲಿ ಏಕ ಬಳಕೆಯ ಪ್ಲಾಸ್ಟಿಕ್‌ಗೆ ನಿಷೇಧ: ಇಲ್ಲಿದೆ ಸಂಪೂರ್ಣ ಮಾಹಿತಿ

Update: 2022-07-01 17:52 GMT
Phot: PTI

ಹೊಸದಿಲ್ಲಿ, ಜು. ೧: ದೇಶದಲ್ಲಿ ಏಕ ಬಳಕೆಯ ಪ್ಲಾಸ್ಟಿಕ್‌ಗೆ ಕೇಂದ್ರ ಸರಕಾರ ಶುಕ್ರವಾರದಿಂದ ನಿಷೇಧ ಹೇರಿದೆ. ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ತಿದ್ದುಪಡಿ ನಿಯಮಗಳ ಬಗ್ಗೆ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯ  2021 ಆಗಸ್ಟ್‌ನಲ್ಲಿ ಅಧಿಸೂಚನೆ ಹೊರಡಿಸಿತ್ತು. ಈ ನಿಯಮ ಏಕ ಬಳಕೆಯ ಹಲವು ಪ್ಲಾಸ್ಟಿಕ್ ವಸ್ತುಗಳ ಉತ್ಪಾದನೆ, ಆಮದು, ದಾಸ್ತಾನು, ವಿತರಣೆ,  ಮಾರಾಟ ಹಾಗೂ ಬಳಕೆಯನ್ನು ನಿಷೇಧಿಸುತ್ತದೆ. 

ದೇಶದಲ್ಲಿ ಚದುರಿ ಬಿದ್ದ ಹಾಗೂ ಸಂಗ್ರಹಿಸದೇ ಇರುವ  ಪ್ಲಾಸ್ಟಿಕ್ ತ್ಯಾಜ್ಯದಿಂದ ಉಂಟಾಗುವ ಮಾಲಿನ್ಯವನ್ನು ನಿಯಂತ್ರಿಸಲು ಬಯಸುವುದಾಗಿ ಕೇಂದ್ರ ಸರಕಾರ ಹೇಳಿದೆ. ಚದುರಿ ಬಿದ್ದ ಏಕ ಬಳಕೆಯ ಪ್ಲಾಸ್ಟಿಕ್ ತ್ಯಾಜ್ಯಗಳು ಸಮುದ್ರ ಪರಿಸರ ಸೇರಿದಂತೆ ಭೂಮಿ ಹಾಗೂ ಜಲಚರ ಪರಿಸರ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುವುದನ್ನು ಜಾಗತಿಕವಾಗಿ ಗುರುತಿಸಲಾಗಿದೆ ಎಂದು ಕೇಂದ್ರ ಸರಕಾರ ಬುಧವಾರ ಹೇಳಿದೆ. 

ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳಿಂದ ಉಂಟಾಗುವ ಮಾಲಿನ್ಯ ಎಲ್ಲ ದೇಶಗಳು ಎದುರಿಸುತ್ತಿರುವ ಪ್ರಮುಖ ಪರಿಸರ ಸವಾಲಾಗಿದೆ ಎಂದು ಅದು ತಿಳಿಸಿದೆ. 
75 ಮೈಕ್ರಾನ್‌ಗಿಂತ ಕಡಿಮೆ ಪ್ರಮಾಣದ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‌ಗಳನ್ನು  ಸೆಪ್ಟಂಬರ್‌ನಲ್ಲಿ ಬ್ಯಾನ್ ಮಾಡಲಾಗಿತ್ತು. 120 ಮೈಕ್ರೋನ್‌ಗಿಂತ ಕಡಿಮೆ ದಪ್ಪದ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‌ಗಳು ಈ ವರ್ಷ ಡಿಸೆಂಬರ್ 31ರಿಂದ ನಿಷೇಧವಾಗಲಿದೆ. 

ನಿಯಮಗಳನ್ನು ಅನುಸರಿಸಲಾಗುತ್ತಿದೆಯೇ ಎಂದು ಪರಿಶೀಲಿಸಲು ಪ್ರತಿ ರಾಜ್ಯದಲ್ಲಿ ನಿಯಂತ್ರಣ ಕೊಠಡಿ ಹಾಗೂ ಜಾರಿ ತಂಡಗಳನ್ನು ರೂಪಿಸಲಾಗಿದೆ.
ಇದಲ್ಲದೆ, ಏಕ ಬಳಕೆಯ ಯಾವುದೇ ಪ್ಲಾಸ್ಟಿಕ್ ವಸ್ತುಗಳು ಅಂತರ ರಾಜ್ಯಗಳಲ್ಲಿ ಸಾಗಾಟ ಆಗುವುದನ್ನು ತಡೆಯಲು ಗಡಿಯಲ್ಲಿ ತಪಾಸಣಾ ಕೇಂದ್ರಗಳನ್ನು ಆರಂಭಿಸುವಂತೆ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಗಿದೆ.

► ನಿಷೇಧಿಸಲಾದ  ಪ್ಲಾಸ್ಟಿಕ್ ವಸ್ತುಗಳು

  • ಇಯರ್ ಬಡ್‌ಗಳು ಹಾಗೂ ಪ್ಲಾಸ್ಟಿಕ್ ಕಡ್ಡಿ ಇರುವ ಬಲೂನ್‌ಗಳು 
  • ಪ್ಲಾಸ್ಟಿಕ್ ಧ್ವಜಗಳು
  • ಕ್ಯಾಂಡಿ ಕಡ್ಡಿ ಹಾಗೂ ಐಸ್‌ಕ್ರೀಂ ಕಡ್ಡಿಗಳು 
  • ಅಲಂಕಾರಕ್ಕೆ ಬಳಸುವ ಪೋಲಿಸ್ಟರಿನ್ (ಥರ್ಮೊಕೋಲ್)
  • ಪಾಸ್ಟಿಕ್‌ನಲ್ಲಿ ನಿರ್ಮಿಸಲಾದ ಚಮಚ, ಫೋರ್ಕ್, ತಟ್ಟೆ, ಕಪ್, ಗ್ಲಾಸ್ ಹಾಗೂ ಟ್ರೇಗಳು
  • ಸಿಹಿ ತಿಂಡ ಪೊಟ್ಟಣಗಳಿಗೆ ಹೊದಿಸುವ ಫಿಲ್ಮ್‌ಗಳು
  • ಆಹ್ವಾನ ಪತ್ರಿಕೆಗಳು 
  • ಸಿಗರೇಟ್ ಪ್ಯಾಕೇಟ್‌ಗಳು
  • ೧೦೦ ಮೆಕ್ರೋನ್‌ಗಿಂತ ಕೆಳಗಿನ ಪ್ರಮಾಣದ ಪ್ಲಾಸ್ಟಿಕ್ ಅಥವಾ ಪಿವಿಸಿ ಬ್ಯಾನರ್‌ಗಳು 
  • ಪ್ಲಾಸ್ಟಿಕ್ ಚೀಲಗಳು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News