ಕಲಿಕೆಯಲ್ಲಿ ಹಿಂದುಳಿದ 7 ಜಿಲ್ಲೆಗಳ ಪೈಕಿ 6 ಈಶಾನ್ಯ ರಾಜ್ಯಗಳು: ಶಿಕ್ಷಣ ಸಚಿವಾಲಯ

Update: 2022-07-01 17:49 GMT

ಹೊಸದಿಲ್ಲಿ, ಜು. 1: ಭಾರತದ ಏಳು ಜಿಲ್ಲೆಗಳು 'ಕೆಟ್ಟ ನಿರ್ವಹಣೆ' ತೋರಿವೆ ಎಂಬುದಾಗಿ ಶಿಕ್ಷಣ ಸಚಿವಾಲಯವು ತನ್ನ 'ಜಿಲ್ಲೆಗಳ ನಿರ್ವಹಣಾ ಶ್ರೇಣಿ ಸೂಚ್ಯಂಕ (ಪಿಜಿಐ-ಡಿ)ದಲ್ಲಿ ತಿಳಿಸಿದೆ. 2018-19 ಮತ್ತು 2019-20- ಈ ಎರಡು ವರ್ಷಗಳ ಅವಧಿಯಲ್ಲಿನ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ವಿಶ್ಲೇಷಿಸುವ ಜಂಟಿ ವರದಿಯನ್ನು ಸಚಿವಾಲಯವು ಸೋಮವಾರ ಬಿಡುಗಡೆ ಮಾಡಿದೆ.

ಈ ಏಳು ಜಿಲ್ಲೆಗಳ ಪೈಕಿ ಆರು ಜಿಲ್ಲೆಗಳು ಈಶಾನ್ಯದ ರಾಜ್ಯಗಳಾದ ಮಿರೆರಾಮ್ ಮತ್ತು ಅರುಣಾಚಲಪ್ರದೇಶಗಳಲ್ಲಿವೆ. ಒಂದು ಜಿಲ್ಲೆ ಪಶ್ಚಿಮ ಬಂಗಾಳದಲ್ಲಿದೆ.

2019-20ರಲ್ಲಿ, ಅರುಣಾಚಲಪ್ರದೇಶದ ಶಿ ಯೊಮಿ ಮತ್ತು ಕ್ರಾ ಡೈ ಹಾಗೂ ಮಿರೆರಾಮ್‌ನ ಮಮಿಟ್ ಜಿಲ್ಲೆಗಳು ತಳದಲ್ಲಿದ್ದವು. 2018-19ರಲ್ಲಿ, ಅರುಣಾಚಲಪ್ರದೇಶದ ನಮ್ಸಾಲ್ ಹಾಗೂ ಮಿರೆರಾಮ್‌ನ ಮಮಿಟ್, ಸೆರ್ಛಿಪ್ ಮತ್ತು ಲವಾಂಗ್‌ಟಲೈ ಜಿಲ್ಲೆಗಳು ಪಟ್ಟಿಯ ತಳದಲ್ಲಿದ್ದವು.

ಇದು, ಕಲಿಕಾ ಫಲಿತಾಂಶ, ಮೂಲಸೌಕರ್ಯ ಮತ್ತು ಇತರ ಮಾನದಂಡಗಳ ಆಧಾರದಲ್ಲಿ ರಾಜ್ಯಗಳು ಮಾತ್ರವಲ್ಲ, ಜಿಲ್ಲೆಗಳಿಗೂ ಶ್ರೇಣಿಗಳನ್ನು ನೀಡುವುದಕ್ಕಾಗಿ ಶಿಕ್ಷಣ ಸಚಿವಾಲಯ ನಡೆಸಿದ ಮೊದಲ ಸಮೀಕ್ಷೆಯಾಗಿದೆ.

ಪಿಜಿಐ-ಡಿ ವಿಶ್ಲೇಷಣೆಯು ನಿಖರ ಚಿತ್ರಣವನ್ನು ಕೊಡುವುದಿಲ್ಲವಾದರೂ, ರಾಜ್ಯಗಳಲ್ಲಿರುವ ಮೂಲಸೌಕರ್ಯ ಸಮಸ್ಯೆಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ ಎಂದು ಈ ರಾಜ್ಯಗಳ ಶಿಕ್ಷಣ ತಜ್ಞರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News