ಭಾರತ ಚೊಚ್ಚಲ ಮಾನವ ರಹಿತ ಯುದ್ದ ವಿಮಾನ ಯಶಸ್ವಿ ಹಾರಾಟ

Update: 2022-07-01 18:38 GMT
Photo: Twitter/@rajnathsingh

ಹೊಸದಿಲ್ಲಿ, ಜೂ. ೩೦: ಭಾರತದ ಚೊಚ್ಚಲ ಸ್ವಯಂಚಾಲಿತ ವಿಮಾನವನ್ನು ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಕರ್ನಾಟಕದ ಚಿತ್ರದುರ್ಗದಲ್ಲಿರುವ ವೈಮಾನಿಕ ಪರೀಕ್ಷಾ ವಲಯದಿಂದ ಶುಕ್ರವಾರ ಯಶಸ್ವಿಯಾಗಿ ಹಾರಾಟ ನಡೆಸಿತು. 

ಸಂಪೂರ್ಣವಾಗಿ ಸ್ವಯಂಚಾಲಿತವಾಗಿ ಕಾರ್ಯ ನಿರ್ವಹಿಸುವ ಈ ವಿಮಾನ ಟೇಕ್ ಆಫ್, ದಾರಿ ಗುರುತಿಸುವುದು ಹಾಗೂ ಭೂಸ್ಪರ್ಶ ಸೇರಿದಂತೆ ಪರಿಪೂರ್ಣ ಹಾರಾಟ ನಡೆಸಿತು. ಭವಿಷ್ಯದ ಮಾನವ ರಹಿತ ವಿಮಾನಗಳ ಅಭಿವೃದ್ಧಿಯತ್ತ ನಿರ್ಣಾಯಕ ತಂತ್ರಜ್ಞಾನನ್ನು ಸಾಬೀತುಮಾಡುವ ವಿಚಾರದಲ್ಲಿ ಈ ವಿಮಾನ ಪ್ರಮುಖ ಮೈಲಿಗಲ್ಲು. ಅಲ್ಲದೆ, ವ್ಯೆಹಾತ್ಮಕ ರಕ್ಷಣಾ ತಂತ್ರಜ್ಞಾನದಲ್ಲಿ ಆತ್ಮ ನಿರ್ಭರದತ್ತ ಗಮನಾರ್ಹ ಹೆಜ್ಜೆ ಎಂದು ರಕ್ಷಣಾ ಸಚಿವಾಲಯದ ಹೇಳಿಕೆ ತಿಳಿಸಿದೆ. 
ಈ ಮಾನವ ರಹಿತ ವಿಮಾನವನ್ನು ಡಿಆರ್‌ಡಿಒದ ಅತ್ಯುಚ್ಚ ಸಂಶೋಧನಾ ಸಂಸ್ಥೆಯಾದ ವೈಮಾನಿಕ ಅಭಿವೃದ್ಧಿ ಸಂಸ್ಥಾಪನೆ (ಎಡಿಇ) ವಿನ್ಯಾಸ ಹಾಗೂ ಅಭಿವೃದ್ಧಿಗೊಳಿಸಿದೆ. ಇದು ಸಣ್ಣ ಟರ್ಬ್‌ಫ್ಯಾನ್ ಎಂಜಿನ್‌ನಿಂದ ಕಾರ್ಯ ನಿರ್ವಹಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News