ಮೀರತ್‌ನಲ್ಲಿ ಕಾನೂನು ವಿದ್ಯಾರ್ಥಿಯ ಹತ್ಯೆ: ಮೂವರ ಬಂಧನ

Update: 2022-07-03 17:34 GMT

ಹೊಸದಿಲ್ಲಿ, ಜು.3: ಉತ್ತರಪ್ರದೇಶದ ಮೀರತ್‌ನಲ್ಲಿ 21 ವರ್ಷ ಪ್ರಾಯದ ಕಾನೂನು ವಿದ್ಯಾರ್ಥಿಯೊಬ್ಬನನ್ನು  ಬರ್ಬರವಾಗಿ ಹತ್ಯೆಗೈದು ಆತನ ಶವವನ್ನು  ಗೋಣಿ ಚೀಲದಲ್ಲಿ ಕಟ್ಟಿ, ಮೋರಿಗೆ ಎಸೆದ ಘಟನೆ ರವಿವಾರ ವರದಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆಂದು ಮೂಲಗಳು ತಿಳಿಸಿವೆ.

ಕೊಲೆಯಾದ ವಿದ್ಯಾರ್ಥಿಯನ್ನು ಯಶ್ ರಸ್ತೋಗಿ ಎಂದು ಗುರುತಿಸಲಾಗಿದ್ದು, ಆತ ಜೂನ್ 27ರಿಂದ ನಾಪತ್ತೆಯಾಗಿದ್ದ. ಶವೇಜ್, ಇಮ್ರಾನ್ ಹಾಗೂ ಸಲ್ಮಾನ್ ಎಂಬವರು ಆತನನ್ನು ಹತ್ಯೆ ಮಾಡಿದ್ದು, ಅವರನ್ನು ಬಂಧಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

ಕೊಲೆಯ ಜಾಡನ್ನು ಪತ್ತೆ ಹಚ್ಚಲು ಪೊಲೀಸರು 250ಕ್ಕೂ ಧಿಕ ಸಿಸಿಟಿವಿ ಕ್ಯಾಮೆರಾಗಳ ಪರಿಶೀಲನೆ ನಡೆಸಿದ್ದದರು. ಹತ್ಯೆಯಾದ ವಿದ್ಯಾರ್ಥಿಯು ಕೆಲವು ಸಲಿಂಗಕಾಮಿಗಳಿಗಾಗಿನ ವೆಬ್‌ಸೈಟ್‌ನಲ್ಲಿ ತನ್ನ ಹೆಸರನ್ನು ನೋಂದಾಯಿಸಿಕೊಂಡಿದ್ದ ಹಾಗೂ ಆತ ವಿವಿಧ ಪುರುಷರೊಂದಿಗೆ ಸಲಿಂಗ ಸಂಬಂಧ ಹೊಂದಿದ್ದನೆನ್ನಲಾಗಿದೆ. ಆತ ಆರೋಪಿಗಳ ಜೊತೆಯೂ ಸಲಿಂಗ ಸಂಬಂಧವನ್ನು ಹೊಂದಿದ್ದು, ಈ ಬಗ್ಗೆ ಆತನ ಇಮೇಲ್‌ನಲ್ಲಿ ಪುರಾವೆಗಳು ಲಭಿಸಿವೆ.  ಲೈಂಗಿಕಕ್ರೀಡೆಯ ಸಂದರ್ಭದಲ್ಲಿ ಆತ ಅವರ ಚಿತ್ರಗಳನ್ನು ಕ್ಲಿಕ್ಕಿಸಿದ್ದ ಹಾಗೂ ಹಣಕ್ಕಾಗಿ ಅವರನ್ನು ಬ್ಲಾಕ್ ಮೇಲ್ ಮಾಡುತ್ತಿದ್ದನೆಂದು ಪೊಲೀಸರು ಹೇಳಿದ್ದಾರೆ.

ಈ ಮೂವರು ಕಳೆದ ಒಂದು ತಿಂಗಳಿನಿಂದ ಕಾನೂನು ವಿದ್ಯಾರ್ಥಿಗೆ 40 ಸಾವಿರ ರೂ. ಪಾವತಿಸಿದ್ದರು. ಆತನನ್ನು ಇನ್ನಷ್ಟು ಹೆಚ್ಚು ಹಣವನ್ನು ಪೀಡಿಸುವಂತೆ ಅವರನ್ನು ಬ್ಲಾಕ್ ಮೇಲ್ ಮಾಡಿದ್ದ. ಆಗ ಈ ಬಗ್ಗೆ ನಡೆದ ಹೊಡೆದಾಟದಲ್ಲಿ ಆತ ಸಾವನ್ನಪ್ಪಿದನೆಂದು ಮೇರಠ್‌ನ ಪೊಲೀಸ್ ಅಧೀಕ್ಷಕ ಸುನೀಲ್ ಭಟ್ನಾಗರಂ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News