ದಿಲ್ಲಿಯನ್ನು ಸಂಪೂರ್ಣ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲು ಕೇಂದ್ರದ ಹುನ್ನಾರ: ಅರವಿಂದ್‌ ಕೇಜ್ರೀವಾಲ್‌

Update: 2022-07-05 17:48 GMT

ಹೊಸದಿಲ್ಲಿ: ಅಸೆಂಬ್ಲಿಯನ್ನು ವಿಸರ್ಜಿಸಿ ದಿಲ್ಲಿ ನಗರವನ್ನು ಸಂಪೂರ್ಣ ಕೇಂದ್ರಾಡಳಿತ ಪ್ರದೇಶವನ್ನಾಗಿ ಪರಿವರ್ತಿಸಲು ಕೇಂದ್ರವು ಮಾತುಕತೆ ನಡೆಸುತ್ತಿದೆ ಎಂದು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮಂಗಳವಾರ ಆರೋಪಿಸಿದ್ದಾರೆ. ಅಂತಹ ಯಾವುದೇ ಕ್ರಮವು ನಿವಾಸಿಗಳಿಂದ ತೀವ್ರ ಪ್ರತಿರೋಧವನ್ನು ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ಮುಂಗಾರು ಅಧಿವೇಶನದ ಎರಡನೇ ದಿನ ದೆಹಲಿ ವಿಧಾನಸಭೆಯಲ್ಲಿ ಮಾತನಾಡಿದ ಅವರು, ಇಲ್ಲಿ ಯಾವುದೇ ಚುನಾವಣೆ ನಡೆಸುವುದಿಲ್ಲ ಎಂಬ ಮಾತುಕತೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

"ಅವರು (ಬಿಜೆಪಿ) ದಿಲ್ಲಿಯನ್ನು ಸಂಪೂರ್ಣ ಕೇಂದ್ರಾಡಳಿತ ಪ್ರದೇಶವಾಗಿ ಪರಿವರ್ತಿಸುತ್ತಾರೆ. ಮುಂದೆ ಚುನಾವಣೆಗಳು ಇರುವುದಿಲ್ಲ ಎಂಬ ಮಾತುಕತೆಗಳು ನಡೆಯುತ್ತಿವೆ. ಕೇಜ್ರಿವಾಲ್ ಅವರನ್ನು ದ್ವೇಷಿಸುವ ಮೂಲಕ ನೀವು ದೇಶವನ್ನು ದ್ವೇಷಿಸಲು ಪ್ರಾರಂಭಿಸಿದ್ದೀರಿ" ಎಂದು ಅರವಿಂದ್ ಕೇಜ್ರಿವಾಲ್ ಸದನದಲ್ಲಿ ಬಿಜೆಪಿ ಶಾಸಕರನ್ನು ಉದ್ದೇಶಿಸಿ ಹೇಳಿದ್ದಾರೆ.

 ಬಿಜೆಪಿ ನೇತೃತ್ವದ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ ದಿಲ್ಲಿ ಮುಖ್ಯಮಂತ್ರಿ, "ಅವರು ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ಭಯಪಡುತ್ತಾರೆ ಮತ್ತು ಅದಕ್ಕಾಗಿಯೇ ಅವರು ಚುನಾವಣೆಗಳನ್ನು ಬಯಸುವುದಿಲ್ಲ. ಕೇಜ್ರಿವಾಲ್ ಬರುತ್ತಾರೆ, ಹೋಗುತ್ತಾರೆ. ಕೇಜ್ರಿವಾಲ್ ಮುಖ್ಯವಲ್ಲ, ಆದರೆ ನೀವು ಚುನಾವಣೆಗಳನ್ನು ನಿಲ್ಲಿಸಿ ಮತ್ತು ಸಂವಿಧಾನವನ್ನು ಚೂರುಚೂರು ಮಾಡಿದರೆ, ಈ ದೇಶವು ನಾಶವಾಗುತ್ತದೆ.” ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News