×
Ad

ಮುಲಾಯಂ ಸಿಂಗ್ ಯಾದವ್‌ಗೆ ಪತ್ನಿ ವಿಯೋಗ‌

Update: 2022-07-09 22:51 IST

ಲಕ್ನೋ, ಜು.9: ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರ ಪತ್ನಿ ಸಾಧನಾ ಯಾದವ್ ಶನಿವಾರ  ಗುರುಗ್ರಾಮದ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದರು. ಅವರು ದೀರ್ಘಕಾಲದಿಂದ ಅಸ್ವಸ್ಥರಾಗಿದ್ದರು. 

ಕಳೆದ ಮೂರು ತಿಂಗಳುಗಳಿಂದ ಸಾಧನಾ ಯಾದವ್ (62) ಅವರು ಶ್ವಾಸಕೋಶದ ಸೋಂಕು ಮತ್ತಿತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಗುರುಗ್ರಾಮದ ಮೇಧಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ  ಅವರು ಶನಿವಾರ ಬೆಳಗ್ಗೆ ಕೊನೆಯುಸಿರೆಳೆದರೆಂದು ಮೂಲಗಳು ತಿಳಿಸಿವೆ.
 
ಸಾಧನಾ ಯಾದವ್  ಅವರು ಮುಲಾಯಂ ಸಿಂಗ್ ಯಾದವ್ ಅವರ ದ್ವಿತೀಯ ಪತ್ನಿ.  ಮುಲಾಯಂ ಅವರ ಮೊದಲ ಪತ್ನಿ ಹಾಗೂ ಎಸ್ಪಿ  ಅಧ್ಯಕ್ಷ ಅಖಿಲೇಶ್ ಯಾದವ್ ಅವರ ಪತ್ನಿ ಮಾಲತಿ ದೇವಿ 2003ರಲ್ಲಿ ನಿಧನರಾಗಿದ್ದರು. ಪತ್ನಿಯ ನಿಧನದ ಸಂದರ್ಭ ಮುಲಾಯಂ ಅವರು ದಿಲ್ಲಿಯಲ್ಲಿದ್ದರೆಂದು ಸಮಾಜವಾದಿ ಪಕ್ಷ ಮೂಲಗಳು ತಿಳಿಸಿವೆ. ಸಾಧನಾ ಅವರ ಪಾರ್ಥಿವ ಶರೀರವನ್ನು ಅಂತ್ಯಕ್ರಿಯೆಗಾಗಿ ಲಕ್ನೋಗೆ ತರಲಾಗುವುದೆಂದು ಅವು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News