ಪುಲ್ವಾಮ: ಇಬ್ಬರು ಶಂಕಿತ ಉಗ್ರರ ಹತ್ಯೆ

Update: 2022-07-11 18:16 GMT

ಶ್ರೀನಗರ, ಜು. 11: ಜಮ್ಮು ಹಾಗೂ ಕಾಶ್ಮೀರದಲ್ಲಿ ಸೋಮವಾರ ನಡೆದ ಎನ್‌ಕೌಂಟರ್‌ನಲ್ಲಿ ಜೈಶೆ ಮುಹಮ್ಮದ್‌ನ ಉಗ್ರ ಕೈಸರ್ ಕೋಕಾ ಸೇರಿದಂತೆ ಇಬ್ಬರು ಶಂಕಿತ ಉಗ್ರರನ್ನು ಹತ್ಯೆಗೈಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಅವಂತಿಪೋರಾ ಪ್ರದೇಶದ ವಂಡಕ್‌ಪೋರಾದಲ್ಲಿ ಭದ್ರತಾ ಪಡೆ ಸುತ್ತುವರಿದು ಶೋಧ ಕಾರ್ಯಾಚರಣೆ ಆರಂಭಿಸಿದ ಬಳಿಕ ಎನ್‌ಕೌಂಟರ್ ನಡೆಯಿತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ‘‘ಭಯೋತ್ಪಾದಕ ಕೈಸರ್ ಕೋಕಾನನ್ನು ಹತ್ಯೆಗೈಯಲಾಗಿದೆ. ಇನ್ನೋರ್ವ ಉಗ್ರನ ಗುರುತು ಇದುವರೆಗೆ ಪತ್ತೆಯಾಗಿಲ್ಲ. ಘಟನಾ ಸ್ಥಳದಲ್ಲಿ ದೋಷಾರೋಪಣ ಸಾಮಗ್ರಿಗಳು, ಶಸ್ತ್ರಾಸ್ತ್ರ ಹಾಗೂ ಸ್ಫೋಟಕ ವಸ್ತುಗಳು ಪತ್ತೆಯಾಗಿವೆ’’ ಎಂದು ಪೊಲೀಸ್ ವಕ್ತಾರರು ಟ್ವೀಟ್ ಮಾಡಿದ್ದಾರೆ. 

ಹಲವು ಭಯೋತ್ಪಾದಕ ಘಟನೆಗಳಿಗೆ ಸಂಬಂಧಿಸಿ ಕೋಕಾ ಬೇಕಾದವನಾಗಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News