×
Ad

ಉತ್ತರಪ್ರದೇಶ: ‘‘ಬಾಯ್ ಬಾಯ್ ಮೋದಿ’’ ಹೋರ್ಡಿಂಗ್ ಅಳವಡಿಸಿದ್ದಕ್ಕೆ ಐವರ ಬಂಧನ

Update: 2022-07-12 23:24 IST

ಲಕ್ನೋ, ಜು. 12: ಪ್ರಯಾಗ್ ರಾಜ್‌ನಲ್ಲಿ ಕಳೆದ ವಾರ ‘‘ಬಾಯ್ ಬಾಯ್ ಮೋದಿ’’ ಎಂದು ಬರೆದ ಹೋರ್ಡಿಂಗ್ ಅಳವಡಿಸಿದ ಆರೋಪದಲ್ಲಿ ಐವರನ್ನು ಉತ್ತರಪ್ರದೇಶ ಪೊಲೀಸರು ಸೋಮವಾರ ಬಂಧಿಸಿದ್ದಾರೆ. 

ಈ ಬ್ಯಾನರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರೂ. 1,105 ರೂಪಾಯಿಯ ಬೆಲೆಯ ಎಲ್‌ಪಿಜಿ ಸಿಲಿಂಡರ್ ಹಿಡಿದಿರುವ ವ್ಯಂಗ್ಯ ಚಿತ್ರವನ್ನು ಬರೆಯಲಾಗಿತ್ತು. 
ಅಲ್ಲದೆ, ‘‘ನೀವು ಕೃಷಿ ಕಾಯ್ದೆಯ ವಿರುದ್ಧ ಪ್ರತಿಭಟನೆಯ ಸಂದರ್ಭ ಹಲವು ಕೃಷಿಕರ ಬದುಕನ್ನು ಕಸಿದುಕೊಂಡಿದ್ದೀರಿ’’ ಹಾಗೂ ‘‘ಗುತ್ತಿಗೆ ಉದ್ಯೋಗದಿಂದ ಯುವಕರ ಕನಸನ್ನು ಕೊಂದಿದ್ದೀರಿ’’ ಎಂದು ಬರೆಯಲಾಗಿದೆ.  

ಹೋರ್ಡಿಂಗ್ ಅಳವಡಿಸಿದ ಆರೋಪದಲ್ಲಿ ಅಭಯ್ ಕುಮಾರ್ ಸಿಂಗ್, ಅಂಕಿತ್ ಕೇಸರಿ, ರಾಜೇಶ್ ಕೇಸರ್ವಾನಿ, ಶಿವ ಹಾಗೂ ನಾಂಕಾ ಆಲಿಯಾಸ್ ಧರ್ಮೇಂದ್ರ ಅವರನ್ನು ಪೊಲೀಸರು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News