ಮಲ್ಪೆ ಮಹಿಳಾ ಮೀನುಗಾರ ಸಹಕಾರಿ ಸಂಘದ ಅಧ್ಯಕ್ಷೆ ಜಲಜ ಕೋಟ್ಯಾನ್ ನಿಧನ
Update: 2022-07-14 21:18 IST
ಮಲ್ಪೆ, ಜು.14: ಮಲ್ಪೆ ಮಹಿಳಾ ಮೀನುಗಾರ ಸಹಕಾರಿ ಸಂಘದ ಅಧ್ಯಕ್ಷೆ, ಮೀನು ವ್ಯಾಪಾರಸ್ಥೆ, ಶೇಖರ ಬಂಗೇರ ಅವರ ಪತ್ನಿ ಜಲಜ ಕೋಟ್ಯಾನ್(57) ಅಸೌಖ್ಯದಿಂದ ಜು.14ರಂದು ನಿಧನರಾದರು.
ಮಲ್ಪೆ ಅಯ್ಯಪ್ಪ ಸ್ವಾಮಿ ಮಂದಿರದ ಮತ್ಸ್ಯಗಂಧಿ ಮಾತೃ ಮಂಡಳಿಯ ಅಧ್ಯಕ್ಷರಾಗಿದ್ದ ಇವರು, ಉಚ್ಚಿಲ ಮಹಾಲಕ್ಷ್ಮೆ ದೇವಸ್ಥಾನ ಜೀಣೋದ್ದಾರ ಉಪ ಸಮಿತಿ ಮಲ್ಪೆ ವಲಯದ ಮುಖ್ಯಸ್ಥರಾಗಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಪುತರನ್ನು ಅಗಲಿದ್ದಾರೆ. ಮೃತರ ನಿಧನಕ್ಕೆ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಸುವರ್ಣ ಸಂತಾಪ ವ್ಯಕ್ತಪಡಿಸಿದ್ದಾರೆ.