×
Ad

ಪುನೀತ್‌ ರಾಜ್‌ಕುಮಾರ್‌ ಅಭಿನಯದ ಕೊನೆಯ ಸಾಕ್ಷ್ಯಚಿತ್ರ ʼಗಂಧದ ಗುಡಿʼಗೆ ಗರಿಗೆದರಿದ ನಿರೀಕ್ಷೆ

Update: 2022-07-15 21:48 IST
Editor : Saleeth Sufiyan

ಬೆಂಗಳೂರು: ಪುನೀತ್‌ ರಾಜ್‌ಕುಮಾರ್‌ ಅಭಿನಯದ ಕೊನೆಯ ಸಾಕ್ಷ್ಯಚಿತ್ರ ʼಗಂಧದ ಗುಡಿʼ ಇದೇ ವರ್ಷದ ಅಕ್ಟೋಬರ್‌ 28 ಕ್ಕೆ ತೆರೆ ಕಾಣಲಿದೆ. 

ಈ ಕುರಿತು ದಿವಂಗತ ಪುನೀತ್‌ ಮಡದಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಟ್ವೀಟ್‌ ಮಾಡಿದ್ದು, “ಅಪ್ಪು ಅವರ ಕೊನೆಯ ಚಿತ್ರ. ಅವರು ಅವರಾಗಿಯೇ ಕಾಣಿಸಿಕೊಂಡಿರುವ ವಿಶಿಷ್ಟ ಕಥನ. ಕರ್ನಾಟಕದ ಅದ್ಭುತ ಜಗತ್ತನ್ನು ಅನ್ವೇಷಿಸುವ ಪಯಣ. ಅವರಿಗೆ ಅಪಾರ ಪ್ರೀತಿಯನ್ನು ಕೊಟ್ಟ ನಾಡಿಗೆ ಅವರ ಪ್ರೀತಿಯ ಕಾಣಿಕೆ” ಎಂದು ಬರೆದಿದ್ದಾರೆ. 

ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್‌ ಅವರ ಕನಸಿನ ಯೋಜನೆಯಾದ ಈ ಚಿತ್ರವನ್ನು ತೆರೆಯ ಮೇಲೆ ಕಾಣಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಸದ್ಯ ಇತ್ರದ ನಿರ್ಮಾಪಕಿ ಈ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದು, ದೀರ್ಘ ಕಾಲದ ಕಾಯುವಿಕೆಗೆ ಉತ್ತರ ಸಿಕ್ಕಿದಂತಾಗಿದೆ. 

 ‘ಕರ್ನಾಟಕದ ಕಾಡು ಉಳಿಸಿ’ ಎಂಬ ಡಾ. ರಾಜ್ ಕುಮಾರ್ ಸಂದೇಶವೇ ಹೊಸ ಗಂಧದ ಗುಡಿಯ ಕಥೆಯ ಜೀವಾಳ ಎನ್ನಲಾಗಿದೆ. ಚಿತ್ರದಲ್ಲಿ ಪುನೀತ್‌ ವ್ಯಕ್ತಿಯಾಗಿ ಕಾಣಿಸಿಕೊಳ್ಳಲಿದ್ದು, ಕಾಡನ್ನು ಅನ್ವೇಷಿಸುವ ಚಿತ್ರವಾಗಿ ಇದು ಇರಲಿದೆ. 
 
ಸಾಮಾನ್ಯವಾಗಿ ಇಂತಹಾ ಸಾಕ್ಷ್ಯಚಿತ್ರಗಳು (ಡಾಕ್ಯುಮೆಂಟ್ ಸಿನಿಮಾ) ಚಿತ್ರಮಂದಿರದಲ್ಲಿ ರಿಲೀಸ್ ಮಾಡುವುದು ಕಡಿಮೆ. ಆದರೆ ಪುನೀತ್‌ ಅವರನ್ನು ಬೆಳ್ಳಿ ತೆರೆ ಮೇಲೆ ಕಾಣಲು ಚಿತ್ರತಂಡವು ಈ ಸಿನೆಮಾವನ್ನು ಥಿಯೇಟರಿನಲ್ಲೇ ಬಿಡುಗಡೆಗೊಳಿಸಲಿದೆ ಎಂದು ಹೇಳಲಾಗಿದೆ.

Writer - Saleeth Sufiyan

Audience Development & Tech

Editor - Saleeth Sufiyan

Audience Development & Tech

Similar News