‘ಮಿಸೈಲ್ ಮಹಿಳೆ’ ಡಾ. ಟೆಸ್ಸಿ ಥೋಮಸ್‌ಗೆ ಎಪಿಜೆ ಪ್ರಶಸ್ತಿ

Update: 2022-07-15 18:23 GMT

ಕನ್ಯಾಕುಮಾರಿ, ಜು. 15: ಭಾರತದ ಕ್ಷಿಪಣಿ ಯೋಜನೆಯ ನೇತೃತ್ವದ ವಹಿಸಿದ್ದ ಮೊದಲ ಮಹಿಳಾ ವಿಜ್ಞಾನಿ ಹಾಗೂ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಯ ಮಹಾ ನಿರ್ದೇಶಕಿ (ಏರೋ ಸಿಸ್ಟಮ್) ಡಾ. ಟೆಸ್ಸಿ ಥೋಮಸ್ ಅವರು 2022ರ ಎಪಿಜಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 

ಎಂಐಎನ್‌ಎಸ್‌ನ ಸಹಯೋಗದೊಂದಿಗೆ ನೂರುಲ್ ಇಸ್ಲಾಂ ವಿಶ್ವವಿದ್ಯಾನಿಲಯದ ಕುಲಪತಿ ಎ.ಪಿ. ಮಜೀದ್ ಖಾನ್ ನೇತೃತ್ವದ ಆಯ್ಕೆ ಸಮಿತಿ ಇತ್ತೀಚೆಗೆ ಈ ಪ್ರಶಸ್ತಿ ಪ್ರಕಟಿಸಿತ್ತು. 

ತಮ್ಮ ಕ್ಷೇತ್ರದಲ್ಲಿ ಸಾಧನಗೈದ ಸರಕಾರಿ ಅಧಿಕಾರಿಗಳನ್ನು ಗುರುತಿಸಲು ಕನ್ಯಾಕುಮಾರಿ ಜಿಲ್ಲೆಯ ಕುಮಾರಕೋವಿಲ್‌ನಲ್ಲಿರುವ ನೂರುಲ್ ಇಸ್ಲಾಂ ಸೆಂಟರ್ ಫಾರ್ ಹೈಯರ್ ಎಜುಕೇಶನ್ ಹಾಗೂ ಎನ್‌ಐಎಂಎಸ್ ಮೆಡಿಸಿಟಿ ಜಂಟಿಯಾಗಿ 2019ರಲ್ಲಿ ಈ ಪ್ರಶಸ್ತಿಯನ್ನು ಆರಂಭಿಸಿತ್ತು. 
ನೈಯಾರ್ಟಿಂಕಾರೈಯ ಎನ್‌ಐಎಂಎಸ್ ಮೆಡಿಸಿಟಿಯಲ್ಲಿ ಜುಲೈ 19ರಂದು ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೇರಳದ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಅವರು ಉಪಸ್ಥಿತರಿರಲಿದ್ದಾರೆ. 

ಪ್ರಶಸ್ತಿ ಪುರಷ್ಕೃತರು 1 ಲಕ್ಷ ರೂಪಾಯಿ ನಗದು, ಪ್ರಶಂಸಾ ಪತ್ರ ಹಾಗೂ ಸ್ಮರಣಾರ್ಥ ಟ್ರೋಪಿಯನ್ನು ಸ್ವೀಕರಿಸಲಿದ್ದಾರೆ ಎಂದು ಪತ್ರಿಕಾ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News