ತಾಂತ್ರಿಕ ದೋಷ: ಕರಾಚಿಯಲ್ಲಿ ಲ್ಯಾಂಡಿಂಗ್ ಆದ ಶಾರ್ಜಾದಿಂದ ಹೈದರಾಬಾದ್‌ಗೆ ತೆರಳುತ್ತಿದ್ದ ಇಂಡಿಗೋ ವಿಮಾನ
ಹೊಸದಿಲ್ಲಿ: ಶಾರ್ಜಾದಿಂದ ಹೈದರಾಬಾದ್‌ಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷವಿದೆ ಎಂದು ಪೈಲಟ್ ವರದಿ ಮಾಡಿದ ಹಿನ್ನೆಲೆಯಲ್ಲಿ ವಿಮಾನವು ಇಂದು ಪಾಕಿಸ್ತಾನಕ್ಕೆ ತೆರಳಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ವಿಮಾನವು ಕರಾಚಿಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಲ್ಯಾಂಡಿಂಗ್ ಆಗಿದ್ದು, ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ..
ಪ್ರಯಾಣಿಕರನ್ನು ಹೈದರಾಬಾದ್‌ಗೆ ಕಳುಹಿಸಲು ಕರಾಚಿಗೆ ಹೆಚ್ಚುವರಿ ವಿಮಾನವನ್ನು ಕಳುಹಿಸಲಾಗುವುದು ಎಂದು ಇಂಡಿಗೋ ತಿಳಿಸಿದೆ.
" ಶಾರ್ಜಾದಿಂದ ಹೈದರಾಬಾದ್‌ಗೆ ತೆರಳುತ್ತಿದ್ದ ಇಂಡಿಗೋ ವಿಮಾನ 6ಇ-1406 ಅನ್ನು ಕರಾಚಿಗೆ ತಿರುಗಿಸಲಾಯಿತು. ಪೈಲಟ್ ತಾಂತ್ರಿಕ ದೋಷವನ್ನು ಗಮನಿಸಿದರು. ಅಗತ್ಯ ಕಾರ್ಯವಿಧಾನಗಳನ್ನು ಅನುಸರಿಸಲಾಯಿತು ಹಾಗೂ ಮುನ್ನೆಚ್ಚರಿಕೆಯಾಗಿ ವಿಮಾನವನ್ನು ಕರಾಚಿಗೆ ತಿರುಗಿಸಲಾಯಿತು. ಹೈದರಾಬಾದ್‌ಗೆ ಪ್ರಯಾಣಿಕರನ್ನು ಕರೆತರಲು ಹೆಚ್ಚುವರಿ ವಿಮಾನವನ್ನು ಕರಾಚಿಗೆ ಕಳುಹಿಸಲಾಗುತ್ತಿದೆ " ಎಂದು ವಿಮಾನಯಾನ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಇಂಜಿನ್ 2 ಅಥವಾ ವಿಮಾನದ ಬಲ ಎಂಜಿನ್‌ನಲ್ಲಿ ಸಿಸ್ಟಮ್ ದೋಷ ಪತ್ತೆಯಾದ ನಂತರ ಇಂಡಿಗೊ ಏರ್‌ಬಸ್ ಮುನ್ನೆಚ್ಚರಿಕೆಯಾಗಿ ಲ್ಯಾಂಡಿಂಗ್ ಮಾಡಿದೆ ಎಂದು ಸರಕಾರದ ಮೂಲಗಳು NDTV ಗೆ ತಿಳಿಸಿವೆ.