ಪಾಕಿಸ್ತಾನದಲ್ಲಿರುವ ಪೂರ್ವಜರ ಮನೆಗೆ 75 ವರ್ಷದ ಬಳಿಕ ಭೇಟಿ ನೀಡಿದ ಭಾರತೀಯ ಮಹಿಳೆ

Update: 2022-07-17 15:24 GMT
Photo: Facebook profile/@reena.varma.146

ಇಸ್ಲಮಾಬಾದ್, ಜು.17: ಭಾರತದ 92 ವರ್ಷದ ಮಹಿಳೆ ರೀನಾ ಛಿಬ್ಬರ್ ಶನಿವಾರ ತನ್ನ ಪೂರ್ವಜರ ಮನೆಗೆ ಭೇಟಿ ನೀಡಲು ಪಾಕಿಸ್ತಾನ ತಲುಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಸದ್ಭಾವನೆಯ ಸೂಚಕವಾಗಿ ಮಹಿಳೆಗೆ ಪಾಕಿಸ್ತಾನದ ಹೈಕಮಿಷನ್ 3 ತಿಂಗಳ ವೀಸಾ ಒದಗಿಸಿತ್ತು ಎಂದು ‘ದಿ ಎಕ್ಸ್ ಪ್ರೆಸ್ ಟ್ರಿಬ್ಯೂನ್’ ವರದಿ ಮಾಡಿದೆ. ವಾಘಾ-ಅಟ್ಟಾರಿ ಗಡಿಯ ಮೂಲಕ ರಾವಲ್ಪಿಂಡಿಯಲ್ಲಿರುವ ಪ್ರೇಮ್‌ನಿವಾಸ್‌ನಲ್ಲಿರುವ ತನ್ನ ಪೂರ್ವಜರ ಮನೆಯತ್ತ ಹೊರಟರು. 

ವೀಸಾ ನಿರ್ಬಂಧ ಸಡಿಲಿಸುವಂತೆ ಅವರು ಉಭಯ ದೇಶಗಳ ಸರಕಾರಗಳಿಗೆ ಈ ಸಂದರ್ಭ ಮನವಿ ಮಾಡಿಕೊಂಡರು. ದೇಶ ವಿಭಜನೆಯ ಮೊದಲು ಪಿಂಡಿಯಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಬಹು ಸಾಂಸ್ಕೃತಿಕ ವೈವಿಧ್ಯಮಯ ಸಮುದಾಯವನ್ನು ರೀನಾ ಸ್ಮರಿಸಿಕೊಂಡರು. ತನ್ನ ಒಡಹುಟ್ಟಿದವರಿಗೆ ಮುಸ್ಲಿಮರ ಸಹಿತ ವಿವಿಧ ಸಮುದಾಯದ ಮಿತ್ರರಿದ್ದು ಎಲ್ಲರೂ ಮನೆಗೆ ಆಗಾಗ ಬರುತ್ತಿದ್ದರು ಎಂದವರು ಹೇಳಿದ್ದಾರೆ. ವಿಭಜನೆಯ ಬಳಿಕ 1947ರಲ್ಲಿ ಅವರ ಕುಟುಂಬ ಭಾರತಕ್ಕೆ ತೆರಳಿದ್ದು ಆಗ ರೀನಾಗೆ 15 ವರ್ಷವಾಗಿತ್ತು. ಅವರು 1965ರಲ್ಲಿ ಪಾಕಿಸ್ತಾನಕ್ಕೆ ತೆರಳಲು ವೀಸಾಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಆಗ ಭಾರತ-ಪಾಕ್ ಯುದ್ಧವಿದ್ದ ಕಾರಣ ವೀಸಾ ನಿರಾಕರಿಸಲಾಗಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News