×
Ad

ಪಾಕಿಸ್ತಾನ: ಉಪಚುನಾವಣೆಯಲ್ಲಿ ಇಮ್ರಾನ್ ಪಕ್ಷಕ್ಕೆ ಮೇಲುಗೈ

Update: 2022-07-18 23:11 IST

ಇಸ್ಲಮಾಬಾದ್, ಜು.18: ಪಂಜಾಬ್ ವಿಧಾನಸಭೆಯ 20 ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಮಾಜಿ ಪ್ರಧಾನಿ ಇಮ್ರಾನ್‌ಖಾನ್  ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್  (ಪಿಟಿಐ) 15 ಸ್ಥಾನದಲ್ಲಿ ಗೆಲುವು ಸಾಧಿಸಿದೆ ಎಂದು ವರದಿಯಾಗಿದೆ. 

ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾರ್ (ಪಿಎಂಎಲ್-ಎನ್) ಕೇವಲ 4 ಸ್ಥಾನ ಪಡೆದಿದ್ದರೆ ಓರ್ವ ಪಕ್ಷೇತರ ಅಭ್ಯರ್ಥಿ ಜಯ ಸಾಧಿಸಿದ್ದಾರೆ ಎಂದು ಎಕ್ಸ್‌ಪ್ರೆಸ್ ಟ್ರಿಬ್ಯೂನಲ್  ವರದಿ ಮಾಡಿದೆ. ಅಧಿಕೃತ ಫಲಿತಾಂಶ ಇನ್ನೂ ಘೋಷಣೆಯಾಗಿಲ್ಲ. ಸೋಲನ್ನು ಮುಕ್ತ ಹೃದಯದಿಂದ ಒಪ್ಪಿಕೊಳ್ಳುವುದಾಗಿ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾರ್ (ಪಿಎಂಎಲ್-ಎನ್) ಪಕ್ಷದ ಹೇಳಿಕೆ ತಿಳಿಸಿದೆ. ಪಂಜಾಬ್ ವಿಧಾನಸಭೆಯಲ್ಲಿ ಎಪ್ರಿಲ್ ತಿಂಗಳಿನವರೆಗೆ ಪಿಟಿಐ ಪಕ್ಷವೇ ಮೇಲುಗೈ ಸಾಧಿಸಿತ್ತು.
 ಮುಖ್ಯಮಂತ್ರಿ ಸರ್ದಾರ್ ಉಸ್ಮಾನ್ ಬಝ್ದಾರ್  ವಿರುದ್ಧ ಪಾಕಿಸ್ತಾನದ ಸಂಸತ್ನಲ್ಲಿ ಅವಿಶ್ವಾಸ ನಿರ್ಣಯವನ್ನು ಚರ್ಚೆಗೆತ್ತಿಕೊಂಡ ಸಂದರ್ಭ ಮುಖ್ಯಮಂತ್ರಿ ರಾಜೀನಾಮೆ ನೀಡಿದ್ದರು. ಆಗ ಇಮ್ರಾನ್‌ಖಾನ್ ಪರ್ಯಾಯ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದು ಅವರು ಪಕ್ಷದೊಳಗಿನ ಭಿನ್ನಮತದಿಂದಾಗಿ ಬಹುಮತ ಸಾಬೀತುಪಡಿಸಲು ವಿಫಲರಾಗಿದ್ದರು.
 ಪಕ್ಷದ ವಿಪ್ ಉಲ್ಲಂಘಿಸಿದ ಶಾಸಕರ ನಡೆಯನ್ನು ಪ್ರಶ್ನಿಸಿ ಇಮ್ರಾನ್ಖಾನ್ ಸುಪ್ರೀಂಕೋರ್ಟ್ಗೆ ದೂರು ಸಲ್ಲಿಸಿದ್ದರು. ಅವರ ವಾದವನ್ನು ಎತ್ತಿಹಿಡಿದ ಸುಪ್ರೀಂಕೋರ್ಟ್ , 20 ಶಾಸಕರನ್ನು ಅನರ್ಹಗೊಳಿಸಿತ್ತು. ಈ ಸ್ಥಾನಗಳಿಗೆ ಚುನಾವಣೆ ನಡೆದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News