×
Ad

ವಾಣಿಜ್ಯ ಸಚಿವಾಲಯದಿಂದ ಮನೆಯಿಂದ ಕೆಲಸದ ನಿಯಮ ಘೋಷಣೆ

Update: 2022-07-20 10:26 IST
Photo:twitter

ಹೊಸದಿಲ್ಲಿ: ವಿಶೇಷ ಆರ್ಥಿಕ ವಲಯ ಘಟಕದಲ್ಲಿ ಗರಿಷ್ಠ ಒಂದು ವರ್ಷದವರೆಗೆ ಮನೆಯಿಂದ ಕೆಲಸ ಮಾಡಲು (ಡಬ್ಲ್ಯುಎಫ್‌ಎಚ್) ಅನುಮತಿಸಲಾಗಿದೆ ಹಾಗೂ  ಒಟ್ಟು ಉದ್ಯೋಗಿಗಳ ಶೇಕಡಾ 50 ಕ್ಕೆ ವಿಸ್ತರಿಸಬಹುದು ಎಂದು ವಾಣಿಜ್ಯ ಸಚಿವಾಲಯ ಮಂಗಳವಾರ ತಿಳಿಸಿದೆ.

ವಾಣಿಜ್ಯ ಇಲಾಖೆಯು ವಿಶೇಷ ಆರ್ಥಿಕ ವಲಯಗಳ ನಿಯಮಗಳು, 2006 ರಲ್ಲಿ ಮನೆಯಿಂದ ಕೆಲಸ ಮಾಡುವುದಕ್ಕಾಗಿ ಹೊಸ ನಿಯಮ 43ಎ ಅನ್ನು ಸೂಚಿಸಿದೆ.

ಎಲ್ಲಾ ವಿಶೇಷ ಆರ್ಥಿಕ ವಲಯಗಳಲ್ಲಿ (ಸೆಝ್) ದೇಶಾದ್ಯಂತ ಏಕರೂಪದ ಡಬ್ಲ್ಯುಎಫ್‌ಎಚ್ ನೀತಿಗೆ ನಿಬಂಧನೆಯನ್ನು ಮಾಡಲು ಉದ್ಯಮದ ಬೇಡಿಕೆಯ ಮೇರೆಗೆ ಅಧಿಸೂಚನೆಯನ್ನು ಹೊರಡಿಸಲಾಗಿದೆ ಎಂದು ಸಚಿವಾಲಯ ಹೇಳಿದೆ. ಹೊಸ ನಿಯಮವು ಸೆಝ್ ನಲ್ಲಿನ ಘಟಕದ ನಿರ್ದಿಷ್ಟ ವರ್ಗದ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ನೀಡುತ್ತದೆ.

ಇವರಲ್ಲಿ IT/ITeS SEZ ಘಟಕಗಳ ಉದ್ಯೋಗಿಗಳು ಸೇರಿದ್ದಾರೆ.  ತಾತ್ಕಾಲಿಕವಾಗಿ ಅಸಮರ್ಥರಾಗಿರುವ ನೌಕರರು ಪ್ರಯಾಣದಲ್ಲಿರುವ ಹಾಗೂ  ಆಫ್‌ಸೈಟ್‌ನಲ್ಲಿ ಕೆಲಸ ಮಾಡುತ್ತಿರುವ ನೌಕರರು ಸೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News