×
Ad

ಎಸೆಸೆಲ್ಸಿ ಫಲಿತಾಂಶ: ಉಡುಪಿ ಜಿಲ್ಲೆಯ ಅಗ್ರ 10 ಶಾಲೆಗಳಲ್ಲಿ ಉದ್ಯಾವರದ ಎಂ.ಇ.ಟಿ. ಪಬ್ಲಿಕ್ ಸ್ಕೂಲ್

Update: 2022-07-21 13:06 IST

ಉಡುಪಿ, ಜು.21: ಕಳೆದ (2021-22) ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉದ್ಯಾವರದ ಎಂ.ಇ.ಟಿ. ಪಬ್ಲಿಕ್ ಸ್ಕೂಲ್ 95.31 ಶೇ. ಗುಣಾತ್ಮಕ ಫಲಿತಾಂಶ ಗಳಿಸುವ ಮೂಲಕ ಜಿಲ್ಲೆಯ ಸರಕಾರಿ, ಅನುದಾನಿತ, ಅನುದಾನರಹಿತ ಆಂಗ್ಲ ಮಾಧ್ಯಮ/ಕನ್ನಡ ಮಾಧ್ಯಮ ಹಾಗೂ ವಸತಿ ಶಾಲೆಗಳ ಪೈಕಿ ಅಗ್ರ 10ರೊಳಗೆ ಸ್ಥಾನ ಪಡೆದಿದೆ.

ಈ ಸಾಧನೆಗಾಗಿ ಎಂ.ಇ.ಟಿ. ಸ್ಕೂಲ್ ಅನ್ನು ಉಡುಪಿ ಜಿಪಂ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉಪನಿರ್ದೇಶಕರ ಕಚೇರಿ, ಉಡುಪಿ ಮತ್ತು ಉಡುಪಿ ಜಿಲ್ಲಾ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘವು ಅಭಿನಂದಿಸಿ ಪ್ರಮಾಣ ಪತ್ರವನ್ನು ನೀಡಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News