ದ್ರೌಪದಿ ಮುರ್ಮು ಪರವಾಗಿ ಟಿಎಂಸಿಯ ಇಬ್ಬರು ಸಂಸದರು, ಓರ್ವ ಶಾಸಕನಿಂದ ಅಡ್ಡ ಮತದಾನ: ಬಿಜೆಪಿ

Update: 2022-07-22 06:44 GMT
Photo:PTI

ಹೊಸದಿಲ್ಲಿ: ಬಿಜೆಪಿ ನೇತೃತ್ವದ ಎನ್‌ಡಿಎ ಅಧ್ಯಕ್ಷೀಯ ಅಭ್ಯರ್ಥಿ ದ್ರೌಪದಿ ಮುರ್ಮು ಗುರುವಾರ ಪ್ರತಿಪಕ್ಷದ ಯಶವಂತ್ ಸಿನ್ಹಾ ವಿರುದ್ಧ ಜಯಗಳಿಸುತ್ತಿದ್ದಂತೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಹಾಗೂ  ತೃಣಮೂಲ ಕಾಂಗ್ರೆಸ್ ವರಿಷ್ಠೆ ಮಮತಾ ಬ್ಯಾನರ್ಜಿ ಅವರಿಗೆ ಶಾಕ್ ನೀಡುವ ಸುದ್ದಿ ಹೊರಬಂದಿದೆ.

ಸಂಸತ್ತಿನ ಮೂವರು ಟಿಎಂಸಿ ಸದಸ್ಯರು ಹಾಗೂ ಓರ್ವ  ಶಾಸಕ ರಾಷ್ಟ್ರಪತಿ ಆಗಿ ಆಯ್ಕೆಯಾದ ದ್ರೌಪದಿ ಮುರ್ಮು ಪರವಾಗಿ ಅಡ್ಡ ಮತದಾನ ಮಾಡಿದ್ದಾರೆ ಎಂದು ಬಿಜೆಪಿ ಹೇಳಿಕೊಂಡಿದೆ, ಆದರೆ ಜುಲೈ 18 ರಂದು ಮತದಾನ ಮುಗಿದ ನಂತರ ಇನ್ನೂ ಕೆಲವರ ಮತಗಳನ್ನು ಅಸಿಂಧು ಎಂದು ಘೋಷಿಸಲಾಯಿತು.

ಇಬ್ಬರು ಟಿಎಂಸಿ ಸಂಸದರು ಹಾಗೂ  ಒಬ್ಬ ಶಾಸಕ ಎನ್‌ಡಿಎ ಅಭ್ಯರ್ಥಿಯ ಪರವಾಗಿ ಅಡ್ಡ ಮತದಾನ ಮಾಡಿದ್ದಾರೆ ಎಂದು ಬಿಜೆಪಿಯ ಐಟಿ ಉಸ್ತುವಾರಿ ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದಾರೆ.

ಇಬ್ಬರು  ಟಿಎಂಸಿ ಸಂಸದರು ಹಾಗೂ  ನಾಲ್ವರು ಶಾಸಕರ ಮತಗಳನ್ನು ಅಸಿಂಧು ಎಂದು ಎಣಿಸಲಾಗಿದೆ ಎಂದು ಅವರು ಹೇಳಿದರು.

ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದ ಮಾಳವಿಯಾ, ಟಿಎಂಸಿ ಮುಖ್ಯಸ್ಥರು ಪ್ರತಿಪಕ್ಷವನ್ನು ಒಟ್ಟಿಗೆ ಸೇರಿಸಲು ಆಶಿಸುತ್ತಿದ್ದಾರೆ, ತಮ್ಮದೇ ಪಕ್ಷದ ಸದಸ್ಯರನ್ನು ಓಲೈಸಲು ಹಾಗೂ  ಏಕತೆಯನ್ನು ಖಚಿತಪಡಿಸಿಕೊಳ್ಳಲು ಅವರು ವಿಫಲರಾಗಿದ್ದಾರೆ ಎಂದು ಹೇಳಿದರು.

ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ, ಒಬ್ಬ ಟಿಎಂಸಿ ಶಾಸಕ ಅಡ್ಡ ಮತದಾನ ಮಾಡಿದ್ದಾರೆ ಎಂದು ಹೇಳಿಕೊಂಡರೆ, ಇತರ ನಾಲ್ಕು ತೃಣಮೂಲ ಶಾಸಕರ ಮತಗಳನ್ನು ತಿರಸ್ಕರಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News