ಪ್ರಧಾನಮಂತ್ರಿ ಹೊಸ ಪ್ರಯೋಗದಿಂದ ದೇಶದ ಭದ್ರತೆ,ಯುವಕರ ಭವಿಷ್ಯ ಅಪಾಯದಲ್ಲಿದೆ: ‘ಅಗ್ನಿಪಥ್’ ಕುರಿತು ರಾಹುಲ್ ಗಾಂಧಿ

Update: 2022-07-24 16:15 GMT

ಹೊಸದಿಲ್ಲಿ,ಜು.24: ಅಗ್ನಿಪಥ್ ಸೇನಾ ನೇಮಕಾತಿ ಯೋಜನೆ ಕುರಿತು ರವಿವಾರ ಕೇಂದ್ರದ ವಿರುದ್ಧ ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು,ಪ್ರಧಾನಿ ನರೇಂದ್ರ ಮೋದಿಯವರ ‘ಪ್ರಯೋಗಾಲಯ’ದ ಈ ನೂತನ ಪ್ರಯೋಗದಿಂದಾಗಿ ದೇಶದ ಭದ್ರತೆ ಮತ್ತು ಯುವಜನರ ಭವಿಷ್ಯ ಅಪಾಯದಲ್ಲಿವೆ ಎಂದು ಹೇಳಿದ್ದಾರೆ.

‌ಪ್ರತಿ ವರ್ಷ 60,000 ಯೋಧರು ನಿವೃತ್ತರಾಗುತ್ತಾರೆ ಮತ್ತು ಇವರ ಪೈಕಿ ಕೇವಲ 3,000 ಜನರು ಸರಕಾರಿ ಉದ್ಯೋಗಗಳನ್ನು ಪಡೆಯುತ್ತಾರೆ ಎಂದು ಟ್ವೀಟ್ನಲ್ಲಿ ಹೇಳಿರುವ ರಾಹುಲ್,ನಾಲ್ಕು ವರ್ಷಗಳ ಗುತ್ತಿಗೆ ಅವಧಿಯ ಬಳಿಕ ನಿವೃತ್ತರಾಗುವ ಸಾವಿರಾರು ‘ಅಗ್ನಿವೀರ ’ರ ಭವಿಷ್ಯಏನಾಗಲಿದೆ ಎಂದು ಪ್ರಶ್ನಿಸಿದ್ದಾರೆ. ಪ್ರಧಾನಿಯವರ ಪ್ರಯೋಗಶಾಲೆಯ ಈ ನೂತನ ಪ್ರಯೋಗದಿಂದಾಗಿ ದೇಶದ ಭದ್ರತೆ ಮತ್ತು ಯುವಜನಾಂಗದ ಭವಿಷ್ಯ ಎರಡೂ ಅಪಾಯದಲ್ಲಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News