ಆಸ್ಪತ್ರೆಯಲ್ಲಿ ಪಾರ್ಥ ಚಟರ್ಜಿ ʼಡಾನ್‌ʼ ಥರ ವರ್ತಿಸುತ್ತಿದ್ದಾರೆ: ನ್ಯಾಯಾಲಯಕ್ಕೆ ಇಡಿ ಮಾಹಿತಿ

Update: 2022-07-24 12:58 GMT

ಹೊಸದಿಲ್ಲಿ: ಬಂಧಿತ ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ ಅವರನ್ನು ಕೋಲ್ಕತ್ತಾದ ಸರ್ಕಾರಿ ಸ್ವಾಮ್ಯದ ಎಸ್‌ಎಸ್‌ಕೆಎಂ ಆಸ್ಪತ್ರೆಗೆ ಸ್ಥಳಾಂತರಿಸುವ ಕುರಿತು ಜಾರಿ ನಿರ್ದೇಶನಾಲಯದ ಮನವಿಯ ವಿಚಾರಣೆ ನಡೆಸುತ್ತಿದ್ದ ಸಂದರ್ಭದಲ್ಲಿ, ಚಟರ್ಜಿ ಅವರು ಆಸ್ಪತ್ರೆಯಲ್ಲಿ ಡಾನ್‌ನಂತೆ ವರ್ತಿಸುತ್ತಿದ್ದಾರೆ ಎಂದು ತನಿಖಾ ಸಂಸ್ಥೆ ಹೇಳಿದೆ.

ಕಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ ಬಿಬೇಕ್ ಚೌಧರಿ ಅವರ ಏಕಸದಸ್ಯ ಪೀಠಕ್ಕೆ ಇಡಿ ನೀಡಿದ ಹೇಳಿಕೆಯಲ್ಲಿ, "ಚಟರ್ಜಿ ಅವರು ಕಾನೂನಿನಿಂದ ತಪ್ಪಿಸಿಕೊಳ್ಳಲು ಅನಾರೋಗ್ಯದ ನೆಪ ಹೇಳುತ್ತಿದ್ದಾರೆ" ಎಂದು ಆರೋಪಿಸಿದೆ.

ತನಿಖಾ ಸಂಸ್ಥೆಯ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅವರು, "ದಯವಿಟ್ಟು ಗಮನಾರ್ಹ ಸಂಗತಿಗಳನ್ನು ಸಹ ನೋಡಿ. ಇದು ಉನ್ನತ ಮಟ್ಟದ ಭ್ರಷ್ಟಾಚಾರದ ಪ್ರಕರಣವಾಗಿದೆ. ಅರ್ಹ ಅಭ್ಯರ್ಥಿಗಳ ಜೀವವನ್ನು ಬಲಿ ನೀಡಲಾಗಿದೆ. ಉನ್ನತ ಶ್ರೇಣಿಯ ಸಚಿವರು ಇದರ ಭಾಗವಾಗಿದ್ದಾರೆ. ಹಣದ ಜಾಡು ಕಂಡುಹಿಡಿಯಲು ನಾವು ಅವರನ್ನು ವಿಚಾರಣೆಗೆ ಒಳಪಡಿಸಬೇಕಾಗಿದೆ. ನಾವು ಅವರನ್ನು ಮೊದಲ 15 ದಿನಗಳಲ್ಲಿ ಮಾತ್ರ ವಿಚಾರಣೆ ನಡೆಸಬಹುದು ಆದರೆ ಅವರು ತುಂಬಾ ಪ್ರಭಾವಶಾಲಿಯಾಗಿದ್ದಾರೆ. ಅವರು ಅನಾರೋಗ್ಯದ ನೆಪವನ್ನಷ್ಟೇ ನೀಡುತ್ತಿದ್ದಾರೆ” ಎಂದು ಸಂಸ್ಥೆ ನ್ಯಾಯಾಲಯಕ್ಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News