×
Ad

ಆಲಿಯಾ ಭಟ್‌ ನಿರ್ಮಾಪಕಿಯಾದ ಚೊಚ್ಚಲ ಚಿತ್ರ ʼಡಾರ್ಲಿಂಗ್ಸ್‌ʼ ಟ್ರೇಲರ್‌ ಬಿಡುಗಡೆ

Update: 2022-07-25 22:07 IST
Editor : Saleeth Sufiyan

ಮುಂಬೈ: ಆಲಿಯಾ ಭಟ್, ಶೆಫಾಲಿ ಶಾ ಮತ್ತು ವಿಜಯ್ ವರ್ಮಾ ನಟಿಸಿರುವ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಡಾರ್ಲಿಂಗ್ಸ್‌ನ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದ ನಿರ್ಮಾಪಕಿಯೂ ಆಗಿರುವ ಆಲಿಯಾ ಭಟ್ ತಮ್ಮ  ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಟ್ರೇಲರ್ ಅನ್ನು ಹಂಚಿಕೊಂಡಿದ್ದಾರೆ.

ಟ್ರೇಲರ್ ಅನ್ನು ಹಂಚಿಕೊಂಡ ಆಲಿಯಾ ಭಟ್, "ನಿರ್ಮಾಪಕಿಯಾಗಿ ನನ್ನ ಮೊದಲ ಚಿತ್ರ!!! ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ತುಂಬಾ ಉತ್ಸುಕಗೊಂಡು, ರೋಮಾಂಚನವಾಯಿತು!!!! ಡಾರ್ಲಿಂಗ್ಸ್ ಟ್ರೇಲರ್ ಈಗ ಹೊರ ಬಂದಿದೆ!." ಎಂದು ಬರೆದಿದ್ದಾರೆ.

ಡಾರ್ಲಿಂಗ್ಸ್ ನಿರ್ಮಾಪಕಿಯಾಗಿ ಆಲಿಯಾ ಭಟ್ ಅವರ ಚೊಚ್ಚಲ ಚಿತ್ರವಾಗಿದೆ. ಅವರು ತಮ್ಮ ಹೋಮ್ ಪ್ರೊಡಕ್ಷನ್ ಕಂಪನಿ ಎಟರ್ನಲ್ ಸನ್‌ಶೈನ್ ಪ್ರೊಡಕ್ಷನ್ಸ್ ಮತ್ತು ಶಾರುಖ್ ಖಾನ್ ಅವರ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಅಡಿಯಲ್ಲಿ ಈ ಚಿತ್ರವನ್ನು ಜಂಟಿಯಾಗಿ ನಿರ್ಮಿಸುತ್ತಿದ್ದಾರೆ.

ಡಾರ್ಲಿಂಗ್ಸ್ ಒಂದು ಡಾರ್ಕ್ ಕಾಮಿಡಿ-ಡ್ರಾಮಾವಾಗಿದ್ದು, ಮುಂಬೈನಲ್ಲಿ ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿರುವ ತಾಯಿ-ಮಗಳ ಜೋಡಿಯ ದಿನ ನಿತ್ಯದ ಕತೆಯನ್ನು ಹೇಳುತ್ತದೆ ಎಂದು ಚಿತ್ರತಂಡ ಮೂಲಗಳು ತಿಳಿಸಿವೆ.   ಜಸ್ಮೀತ್ ಕೆ ರೀನ್ ನಿರ್ದೇಶನದ ಚಿತ್ರದಲ್ಲಿ ಶೆಫಾಲಿ ಶಾ ಆಲಿಯಾಳ ತಾಯಿಯಾಗಿ ಮತ್ತು ವಿಜಯ್ ವರ್ಮಾ ಅವರ ಪತಿಯಾಗಿ ನಟಿಸಿದ್ದಾರೆ.

ವಿಶಾಲ್ ಭಾರದ್ವಾಜ್ ಸಂಗೀತ ನಿರ್ದೇಶನ ಮಾಡಿದ್ದು, ಗುಲ್ಜಾರ್ ಅವರ ಸಾಹಿತ್ಯವು ಚಿತ್ರಕ್ಕಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಹಾಡುಗಳ ಬಗ್ಗೆ ಕುತೂಹಲ ಹುಟ್ಟಿದೆ.  ಆಗಸ್ಟ್ 5 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರದಲ್ಲಿ ಮಳೆಯಾಲಂ ನಟ ರೋಷನ್‌ ಮಾಥ್ಯೂ ಕೂಡಾ ನಟಿಸಿದ್ದಾರೆ. 

Full View

Writer - Saleeth Sufiyan

Audience Development & Tech

Editor - Saleeth Sufiyan

Audience Development & Tech

Similar News