×
Ad

ಉದ್ಧವ್ ಠಾಕ್ರೆಯನ್ನು ಶಿವಸೇನೆಯ ಮುಖ್ಯಸ್ಥರೆಂದು ಉಲ್ಲೇಖಿಸದೆ ಹುಟ್ಟುಹಬ್ಬದ ಶುಭಾಶಯ ಕೋರಿದ ಮಹಾರಾಷ್ಟ್ರ ಸಿಎಂ ಶಿಂಧೆ

Update: 2022-07-27 13:16 IST
Photo:PTI

ಹೊಸದಿಲ್ಲಿ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಮಾಜಿ ಮುಖ್ಯಮಂತ್ರಿ ಹಾಗೂ ಶಿವಸೇನಾ ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರಿಗೆ ಇಂದು (ಜುಲೈ 27) ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

 “ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಗೌರವಾನ್ವಿತ ಉದ್ಧವ್  ಠಾಕ್ರೆ ಅವರಿಗೆ ಜನ್ಮದಿನದ ಶುಭಾಶಯಗಳು. ನೀವು ದೀರ್ಘಾಯುಷ್ಯ ಹಾಗೂ  ಆರೋಗ್ಯವನ್ನು ಹೊಂದಲೆಂದು ತಾಯಿ ಜಗದಂಬಾ ಅವರ ಪಾದಗಳಿಗೆ ನಮಿಸುತ್ತೇನೆ’’ ಎಂದು ಮುಖ್ಯಮಂತ್ರಿ ಶಿಂಧೆ ಟ್ವೀಟಿಸಿದ್ದಾರೆ.

ಆದಾಗ್ಯೂ, ಶಿಂಧೆ ತಮ್ಮ ಟ್ವೀಟ್‌ನಲ್ಲಿ ಉದ್ಧವ್ ಅವರನ್ನು  ಶಿವಸೇನೆ ಪಕ್ಷದ ಅಧ್ಯಕ್ಷರು ಎಂದು ಕರೆದಿಲ್ಲ. ಬದಲಾಗಿ ಅವರನ್ನು ಮಾಜಿ ಮುಖ್ಯಮಂತ್ರಿ ಎಂದು ಉಲ್ಲೇಖಿಸಿ ಹುಬ್ಬೇರಿಸುವಂತೆ ಮಾಡಿದ್ದಾರೆ.

ಶಿವಸೇನೆಯ ಮುಖವಾಣಿ 'ಸಾಮ್ನಾ'ದಲ್ಲಿ ಸಂಸದ ಹಾಗೂ  ಕಾರ್ಯನಿರ್ವಾಹಕ ಸಂಪಾದಕ ಸಂಜಯ್ ರಾವತ್ ಅವರೊಂದಿಗಿನ ಸಂದರ್ಶನದಲ್ಲಿ ಉದ್ಧವ್ ಠಾಕ್ರೆ ಅವರು  ಏಕನಾಥ್ ಶಿಂಧೆ ಬಣದ ಮೇಲೆ ಕಟುವಾದ ದಾಳಿ ನಡೆಸಿದ ಒಂದು ದಿನದ ನಂತರ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲಾಗಿದೆ.

ನಾನು ಆಸ್ಪತ್ರೆಯಲ್ಲಿ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದಾಗ ನಮ್ಮ ವಿರುದ್ಧ ಬಂಡಾಯವನ್ನು ಯೋಜಿಸಲಾಗಿತ್ತು ಎಂದು ಉದ್ಧವ್ ಆರೋಪಿಸಿದರು. ಆಗ ನಾನು  ಪಕ್ಷದ ಎರಡನೇ ಸಾಲಿನ ನಾಯಕರಿಗೆ  ಜವಾಬ್ದಾರಿಯನ್ನು ವಹಿಸಿದ್ದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News