×
Ad

ಪಂಜಾಬ್ ಆರೋಗ್ಯ ಸಚಿವರಿಂದ ಸಾರ್ವಜನಿಕವಾಗಿ ಅವಮಾನ: ಆಸ್ಪತ್ರೆಯ ಉಪ ಕುಲಪತಿ ರಾಜೀನಾಮೆ

Update: 2022-07-30 12:15 IST
ಪಂಜಾಬ್ ಆರೋಗ್ಯ ಸಚಿವ ಚೇತನ್ ಸಿಂಗ್, Photo:twitter

ಚಂಡೀಗಢ: ಪಂಜಾಬ್ ಆರೋಗ್ಯ ಸಚಿವ ಚೇತನ್ ಸಿಂಗ್ ಜೌರಮಜ್ರಾ ಅವರಿಂದ ಸಾರ್ವಜನಿಕವಾಗಿ ಅವಮಾನ ಕ್ಕೀಡಾದ ಒಂದು ದಿನದ ನಂತರ ಫರೀದ್‌ಕೋಟ್‌ನಲ್ಲಿರುವ ಬಾಬಾ ಫರೀದ್ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ರಾಜ್ ಬಹದ್ದೂರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ಇಂದು ರಾಜ್ಯ ಸರಕಾರಕ್ಕೆ ಪತ್ರ ಬರೆದಿದ್ದಾರೆ.

ಆಸ್ಪತ್ರೆಯ ವಾರ್ಡ್‌ಗಳಲ್ಲಿ ಶುಚಿತ್ವದ ಬಗ್ಗೆ ದೂರುಗಳು ಬಂದ ನಂತರ  ರಾಜ್ಯ ಆರೋಗ್ಯ ಸಚಿವ ಚೇತನ್ ಸಿಂಗ್ ಅವರು ಪ್ರೆಸ್ ಹಾಗೂ  ಕ್ಯಾಮೆರಾಮೆನ್‌ಗಳೊಂದಿಗೆ ಸರಕಾರಿ ಆಸ್ಪತ್ರೆಗೆ ಪ್ರವೇಶಿಸಿದರು ಹಾಗೂ  ರೋಗಿಗಳ ಹಾಸಿಗೆಯ ಮೇಲೆ ಮಲಗುವಂತೆ  ಡಾ. ರಾಜ್ ಬಹದ್ದೂರ್  ಗೆ ತಿಳಿಸಿದರು.

‘ಎಲ್ಲ ನಿಮ್ಮ ಕೈಯಲ್ಲಿದೆ, ಎಲ್ಲ ನಿನ್ನಮ್ಮ ಕೈಯಲ್ಲಿದೆ’ ಎಂದು ಹಾಸಿಗೆಯಿಂದ ಏಳಲು ಮುಂದಾದ  ವೈದ್ಯರಿಗೆ ಸಚಿವ ಚೇತನ್ ಸಿಂಗ್  ಹೇಳುತ್ತಿರುವುದು ವೀಡಿಯೊದಲ್ಲಿ ಕೇಳಿಬಂದಿದೆ.

ಈ ಸಮಯದಲ್ಲಿ, ಯಾರೋ ಒಬ್ಬರು ಹಾಸಿಗೆಯನ್ನು ಮೇಲಕ್ಕೆತ್ತಿ ಅದರ ಕಳಪೆ ಸ್ಥಿತಿಯನ್ನು ತೋರಿಸುತ್ತಾರೆ. ನಂತರ ಸಚಿವರು ಸ್ಟೋರ್ ರೂಮ್ ಗಳನ್ನು ತೋರಿಸಬೇಕೆಂದು ಕೇಳುತ್ತಾರೆ.

ಪ್ರತಿಪಕ್ಷ ನಾಯಕರು ಸಚಿವರ ಈ  ವರ್ತನೆಯನ್ನು ‘ಅಗ್ಗದ ನಾಟಕ’ಎಂದು ಟೀಕಿಸಿದ್ದರು.

ಕಾಂಗ್ರೆಸ್ ನಾಯಕ ಪರ್ಗತ್ ಸಿಂಗ್, "ಈ ರೀತಿಯ ವರ್ತನೆಯು ನಮ್ಮ ವೈದ್ಯಕೀಯ ಸಿಬ್ಬಂದಿಯ  ಮನೋ ಸ್ಥೈರ್ಯವನ್ನು ಕುಗ್ಗಿಸುತ್ತದೆ  ಎಂದರು

ಮೇ ತಿಂಗಳಲ್ಲಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ತಮ್ಮ ಆಗಿನ ಆರೋಗ್ಯ ಸಚಿವ ವಿಜಯ್ ಸಿಂಗ್ಲಾ ಅವರನ್ನು ಭ್ರಷ್ಟಾಚಾರದ ಆರೋಪದ ಮೇಲೆ ಸಂಪುಟದಿಂದ ವಜಾಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News