ತೃತೀಯ ಲಿಂಗಿಗಳಿಗೆ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಅವಕಾಶ ನೀಡಬೇಕು: ಕೇರಳ ಹೈಕೋರ್ಟ್

Update: 2022-07-30 08:07 GMT
Photo:PTI

ಹೊಸದಿಲ್ಲಿ: ಕ್ರೀಡಾಕೂಟಗಳಲ್ಲಿ ತೃತೀಯ ಲಿಂಗಿಗಳಿಗೆ ಪ್ರತ್ಯೇಕ ವರ್ಗವಿಲ್ಲದಿದ್ದರೆ, ಅವರು ಆಯ್ಕೆ ಮಾಡಿದ ಲಿಂಗ ವಿಭಾಗದಲ್ಲಿ ಭಾಗವಹಿಸಲು ಅವರಿಗೆ ಅವಕಾಶ ನೀಡಬೇಕು ಎಂದು ಕೇರಳ ಹೈಕೋರ್ಟ್ ಶುಕ್ರವಾರ ಆದೇಶಿಸಿದೆ.

ಮಹಿಳೆಯಾಗಿ ಪರಿವರ್ತನೆಗೊಂಡು ಜಿಲ್ಲಾ ಮಟ್ಟದ ಜೂಡೋ ಸ್ಪರ್ಧೆಯಲ್ಲಿ ಭಾಗವಹಿಸಲು ಬಯಸಿರುವ  ತೃತೀಯಲಿಂಗಿಯೊಬ್ಬರು ಸಲ್ಲಿಸಿದ ಮನವಿಯ ಮೇಲೆ ನ್ಯಾಯಮೂರ್ತಿ ವಿ.ಜಿ.  ಅರುಣ್ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಆದಾಗ್ಯೂ, ಈವೆಂಟ್‌ನಲ್ಲಿ ಭಾಗವಹಿಸಲು ತೃತೀಯಲಿಂಗಿಗಳಿಗೆ ಅವಕಾಶವಿಲ್ಲ ಎಂದು ಈವೆಂಟ್ ಆಯೋಜಕರು ತೃತೀಯ ಲಿಂಗಿಗೆ ಹೇಳಿದ್ದಾರೆ.

ಶುಕ್ರವಾರದ ವಿಚಾರಣೆಯಲ್ಲಿ ನ್ಯಾಯಾಧೀಶರು, ಎಲ್ಲಾ ತೃತೀಯಲಿಂಗಿಗಳಿಗೆ ಸ್ಪರ್ಧೆಗಳಲ್ಲಿ ಭಾಗವಹಿಸಲು ಸಮಾನ ಹಕ್ಕು ಇದೆ ಎಂದು ಹೇಳಿದರು.

"ಇಲ್ಲಿ ತೃತೀಯ ಲಿಂಗಿ ವ್ಯಕ್ತಿಗಳಿಗೆ ಭಾಗವಹಿಸಲು ಯಾವುದೇ ವರ್ಗವಿಲ್ಲದಿದ್ದರೆ ಅರ್ಜಿದಾರರು ಮಹಿಳೆಯಾಗಿ ಭಾಗವಹಿಸಲು ಮನವಿ ಮಾಡುತ್ತಿದ್ದಾರೆ.   ಸಂಘಟಕರು ತೃತೀಯ ಲಿಂಗಿಗಳಿಗೆ ವ್ಯವಸ್ಥೆ ಮಾಡದಿದ್ದರೆ, ಅರ್ಜಿದಾರರು ಅವರು ಆಯ್ಕೆ ಮಾಡಿದ ವಿಭಾಗದಲ್ಲಿ ಭಾಗವಹಿಸಲು ಅನುಮತಿ ನೀಡಬೇಕು"ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.

ಅರ್ಜಿಯ ಅಂತಿಮ ತೀರ್ಪಿನ ತನಕ  ತಾತ್ಕಾಲಿಕವಾಗಿ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಜಿದಾರರಿಗೆ ಅವಕಾಶ ನೀಡುವಂತೆ ಈವೆಂಟ್ ಆಯೋಜಕರನ್ನು ನ್ಯಾಯಾಲಯ ಕೇಳಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ರಾಜ್ಯ ಸರಕಾರ ಮತ್ತು ಕೇರಳ ರಾಜ್ಯ ಕ್ರೀಡಾ ಮಂಡಳಿಗೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News