×
Ad

ರಾಜ್ಯದ ಮುಖ್ಯಮಂತ್ರಿಯವರ ತೋರಿಕೆಯ ಶಾಂತಿ ಸಭೆ : ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್

Update: 2022-07-30 14:38 IST
ಕೆ.ಅಶ್ರಫ್ 

ಮಂಗಳೂರು: ಕ್ರಿಯೆಗೆ ಪ್ರತಿಕ್ರಿಯೆ ಖ್ಯಾತಿಯ ಮುಖ್ಯಮಂತ್ರಿ ಬೊಮ್ಮಾಯಿಯವರು ದ.ಕ. ಜಿಲ್ಲೆಯ ಕೊಲೆ ರಾಜಕೀಯದಲ್ಲಿ ಇನ್ನಿಲ್ಲದ ಸರ್ವ ರೀತಿಯ ಅನ್ಯಾಯವನ್ನು ಎಸಗಿ, ಇಂದು ಕಾನೂನು ಸುವ್ಯವಸ್ತೆಯ ಸಮಸ್ಯೆ ಸೃಷ್ಟಿಯಾದಾಗ ದ.ಕ. ಜಿಲ್ಲಾಧಿಕಾರಿ ಮೂಲಕ ಶಾಂತಿ ಸಭೆಯನ್ನು ಕರೆಸಿ ಪರಿಸ್ಥಿತಿಯನ್ನು ತೇಪೆ ಹಾಕಿ ಮುಚ್ಚಿ ಹಾಕಲು ಪ್ರಯತ್ನಿಸಿರುವುದು ಖೇದಕರ ಎಂದು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್ ಅವರು ತಿಳಿಸಿದ್ದಾರೆ.

ರಾಜ್ಯದ ಓರ್ವ ಉನ್ನತ ಸ್ಥಾನವನ್ನು ಅಲಂಕರಿಸಿದ ಮುಖ್ಯಮಂತ್ರಿ ತನ್ನ ಸಂತಾಪ ಸೂಚಕಕ್ಕೇ ಭೇಟಿ ನೀಡುವ ಶಿಷ್ಟಾಚಾರ ಕಾರ್ಯಕ್ರಮದಲ್ಲಿ ಸತ್ತವನ ಧರ್ಮ ನೋಡಿ ಕೇವಲ ಪ್ರವೀಣ್ ಮನೆಗೆ ಭೇಟಿ ನೀಡಿ, ಮಸೂದ್ ಮನೆಗೆ ಭೇಟಿ ನೀಡಲಿಲ್ಲ. ಕನಿಷ್ಠವಾದರೂ ಮುಖ್ಯ ಮಂತ್ರಿಯವರು ಜಿಲ್ಲೆಗೆ ಭೇಟಿ ನೀಡಿದ ಸಂಧರ್ಭದಲ್ಲಿ ಶಾಂತಿ ಸಭೆ ಕರೆದು ಪರಿಸ್ಥಿತಿಯ ಬಗ್ಗೆ ಚರ್ಚಿಸ ಬಹುದಿತ್ತು. ಇಂದು ಜಿಲ್ಲಾಧಿಕಾರಿ ಮೂಲಕ ಮುಖ್ಯ ಮಂತ್ರಿ ಶಾಂತಿ ಸಭೆಯನ್ನು ತೋರಿಕೆಗಾಗಿ ಕರೆದು ರಾಜ್ಯದ ಜನರನ್ನು ಮೂರ್ಖರನ್ನಾಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ತೋರಿಕೆಯ ಶಾಂತಿ ಸಭೆಗೆ ಜನರು ವಿವೇಚಿಸಿ ಸ್ಪಂದಿಸಬೇಕು ಎಂದು ಕೋರುವುದಾಗಿ ಕೆ.ಅಶ್ರಫ್‌ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News