ಪರ ಪುರುಷನ ಜತೆ ಪತ್ನಿಯನ್ನು ನೋಡಿದ ಪತಿ: ಮರಕ್ಕೆ ಕಟ್ಟಿಹಾಕಿ ಮಹಿಳೆಗೆ ಥಳಿತ

Update: 2022-07-31 03:16 GMT

ಜೈಪುರ: ಮಹಿಳೆಯೊಬ್ಬರನ್ನು ಮರಕ್ಕೆ ಕಟ್ಟಿಹಾಕಿ ಪತಿ ಹಾಗೂ ಇತರ ಸಂಬಂಧಿಕರು ಅಮಾನುಷವಾಗಿ ಥಳಿಸಿದ ಘಟನೆ ರಾಜಸ್ಥಾನದ ಬನ್ಸ್ವಾರಾ ಜಿಲ್ಲೆಯಲ್ಲಿ ನಡೆದಿದೆ.

ಪತಿ ಬಡಿಗೆಯಿಂದ ನಿರ್ದಯವಾಗಿ ಹೊಡೆಯುತ್ತಿದ್ದರೆ, ಮಹಿಳೆ ನೋವಿನಿಂದ ಚೀರುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಕ್ರೌರ್ಯಕ್ಕೆ ಕಾರಣವೆಂದರೆ ಪತಿ ತನ್ನ ಪತ್ನಿಯನ್ನು ತನ್ನ ಸ್ನೇಹಿತನ ಜತೆ ನೋಡಿದ್ದು.

ಏಳು ಗಂಟೆ ಕಾಲ ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಲಾಗಿತ್ತು. ಆಕೆಯ ಜತೆ ಇದ್ದ ಸ್ನೇಹಿತನನ್ನೂ ಹೀಗೆ ಥಳಿಸಲಾಗಿದೆ. ಒಂದು ವೀಡಿಯೊದಲ್ಲಿ ಇಬ್ಬರನ್ನೂ ಮರಕ್ಕೆ ಕಟ್ಟಿಹಾಕಿ ಒಂದು ಗುಂಪು ಇವರನ್ನು ವಿಚಾರಣೆ ನಡೆಸುತ್ತಿರುವ ದೃಶ್ಯ ಇದೆ. ಮಹಿಳೆಯನ್ನು ಥಳಿಸಿದ ನಾಲ್ಕು ದಿನ ಬಳಿಕ ಈ ಸಂಬಂಧ ಎಫ್‍ಐಆರ್ ದಾಖಲಾದೆ.
ಸಂತ್ರಸ್ತೆಯ ಪತಿ, ಭಾವಂದಿರು ಸೇರಿದಂತೆ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ. ಅಪ್ರಾಪ್ತ ವಯಸ್ಸಿನ ಇಬ್ಬರನ್ನೂ ವಶಕ್ಕೆ ಪಡೆಯಲಾಗಿದೆ.

ಘಟನೆಯ ವೀಡಿಯೊವನ್ನು ಶೇರ್ ಮಾಡಿರುವ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು, ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಸರ್ಕಾರವನ್ನು ಗುರಿ ಮಾಡಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗ ಈ ಪ್ರಕರಣವನ್ನು ಶನಿವಾರ ಪರಿಗಣಿಸಿದೆ. ಈ ಸಂಬಂಧ ರಾಜಸ್ಥಾನ ಡಿಜಿಪಿಯವರಿಗೆ ಪತ್ರ ಬರೆದಿರುವ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ, ತಕ್ಷಣ ಎಲ್ಲ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News