×
Ad

ನಿಮ್ಮ ಮತ್ತು ಮಮತಾ ನಡುವೆ ಯಾವುದೇ 'ಸೆಟ್ಟಿಂಗ್' ಇಲ್ಲವೆಂದು ಸ್ಪಷ್ಟಪಡಿಸಿ: ಮೋದಿಗೆ ಆಗ್ರಹಿಸಿದ ತಥಾಗತ ರಾಯ್

Update: 2022-08-05 18:26 IST

ಹೊಸದಿಲ್ಲಿ: ರಾಜಧಾನಿ ದಿಲ್ಲಿಯಲ್ಲಿ ಇಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ  ಮಮತಾ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುವ ಮುನ್ನ  ಮೇಘಾಲಯದ ಮಾಜಿ ರಾಜ್ಯಪಾಲ ಹಾಗೂ ಅಲ್ಲಿನ ಮಾಜಿ ರಾಜ್ಯ ಬಿಜೆಪಿ ಅಧ್ಯಕ್ಷ ತಥಾಗತ ರಾಯ್ ಅವರು ಪ್ರಶ್ನೆಯೊಂದನ್ನು ಎತ್ತಿದ್ದಾರೆ.  ತಮ್ಮ ಹಾಗೂ ಮಮತಾ ಬ್ಯಾನರ್ಜಿ ನಡುವೆ ಯಾವುದೇ `ಸೆಟ್ಟಿಂಗ್' (ಹೊಂದಾಣಿಕೆ) ಇಲ್ಲವೆಂಬುದನ್ನು ಪ್ರಧಾನಿ ಜನರಿಗೆ ಮನವರಿಕೆ ಮಾಡಬೇಕು ಎಂದು ಅವರು ಹೇಳಿದ್ದಾರೆ.

"ಸೆಟ್ಟಿಂಗ್ ಕುರಿತು ಕೊಲ್ಕತ್ತಾದಲ್ಲಿ ಊಹಾಪೋಹಗಳಿವೆ. ಅಂದರೆ ಮೋದೀಜಿ ಮತ್ತು ಮಮತಾ ನಡುವೆ ಒಂದು ರಹಸ್ಯ ಒಪ್ಪಂದ, ಇದರ ಭಾಗವಾಗಿ ತೃಣಮೂಲ ಮತ್ತು/ಅಥವಾ  ಬಿಜೆಪಿ ಕಾರ್ಯಕರ್ತರ ಹಂತಕರು ಯಾವುದೇ ಕ್ರಮ ಎದುರಿಸದೇ ಇರಬಹುದು. ಇಂತಹ ಯಾವುದೇ `ಸೆಟ್ಟಿಂಗ್' ಇಲ್ಲವೆಂದು ನಮಗೆ ಮನವರಿಕೆ ಮಾಡಿ" ಎಂದು ಟ್ವೀಟ್ ಮಾಡಿರುವ ರಾಯ್ ಜೊತೆಗೆ ಪ್ರಧಾನಿಯನ್ನೂ ಟ್ಯಾಗ್ ಮಾಡಿದ್ದಾರೆ.

ಮಮತಾ ಬ್ಯಾನರ್ಜಿ ಅವರು ಪ್ರಧಾನಿ ಮೋದಿ ಅವರೊಂದಿಗಿನ ತಮ್ಮ ಸಭೆಗಳನ್ನು 'ಸೆಟ್ಟಿಂಗ್ ಮಾಡಲಾಗಿದೆ' ಎಂಬ ಸಂದೇಶ ನೀಡಲು ಬಳಸುತ್ತಾರೆ ಎಂದು ಬಿಜೆಪಿ ನಾಯಕ ದಿಲೀಪ್ ಘೋಷ್ ಈ ಹಿಂದೆ ಆರೋಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ವಿರೋಧಿಗಳು ಆಗಾಗ ಮಾಡುವ ಈ ಆರೋಪಗಳು ನಿರಾಧಾರ ಎಂದು ತೃಣಮೂಲ ಕಾಂಗ್ರೆಸ್ಸಿನ ಸುಖೇಂದು ಶೇಖರ್ ರಾಯ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News