ಪರಮಾಣು ಅಸ್ತ್ರಗಳು ಮಾನವೀಯತೆಗೆ ‘ಲೋಡೆಡ್ ಗನ್’: ವಿಶ್ವಸಂಸ್ಥೆ ಎಚ್ಚರಿಕೆ

Update: 2022-08-06 16:01 GMT

ಟೋಕಿಯೊ, ಆ.6: ವಿಶ್ವದಾದ್ಯಂತ ಪರಮಾಣು ದುರಂತದ ಸಂಭಾವ್ಯತೆಯೊಂದಿಗೆ ಬಿಕ್ಕಟ್ಟುಗಳು ಹೆಚ್ಚಾಗುತ್ತಿದ್ದಂತೆ ಮಾನವೀಯತೆಯು ಲೋಡ್ ಮಾಡಿದ ಬಂದೂಕಿನೊಂದಿಗೆ ಆಟವಾಡುವ ಪರಿಸ್ಥಿತಿ ಬಂದಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಹೇಳಿದ್ದಾರೆ.

 ‌

ಜಪಾನ್ ನ ಹಿರೋಷಿಮಾ ನಗರದ ಮೇಲಿನ ಮೊದಲ ಪರಮಾಣು ದಾಳಿಯ 70ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಣ್ಣ ರೆಪ್ಪೆ ಮುಚ್ಚುವಷ್ಟರಲ್ಲಿ ಹತ್ತಾರು ಸಾವಿರ ಜನರು ಈ ನಗರದಲ್ಲಿ ಮೃತಪಟ್ಟರು. ಹೆಂಗಸರು, ಮಕ್ಕಳು ಮತ್ತು ಪುರುಷರು ನರಕಯಾತನೆಯ ಬೆಂಕಿಯಲ್ಲಿ ಸುಟ್ಟುಹೋದರು .

ಈ ನಗರದ ಮೇಲೆ ಕವಿದಿದ್ದ ಅಣಬೆ ಮೋಡ(ಭಾರೀ ಸ್ಫೋಟ ಸಂಭವಿಸುವಾಗ ಆವರಿಸುವ ದಟ್ಟ ಕರಿಯ ಹೊಗೆಯ ಮೋಡ)ದಿಂದ ನಾವೇನು ಕಲಿತಿದ್ದೇವೆ ಎಂಬ ಪ್ರಶ್ನೆಯನ್ನು ನಮಗೇ ಕೇಳಿಕೊಳ್ಳಬೇಕಿದೆ. ಗಂಭೀರ ಪರಮಾಣು ಬಿಕ್ಕಟ್ಟಿನ ಆಕ್ರಂದನ ಅತೀ ವೇಗವಾಗಿ ಹರಡುತ್ತಿದೆ ಎಂದು ಈ ವಾರ ನ್ಯೂಯಾರ್ಕ್ನಲ್ಲಿ ನಡೆದಿದ್ದ ಪರಮಾಣು ಪ್ರಸರಣ ರಹಿತ ಒಪ್ಪಂದದ ಸಂದರ್ಭ ತಾವು ನೀಡಿದ್ದ ಎಚ್ಚರಿಕೆಯನ್ನು ಗುಟೆರಸ್ ಪುನರುಚ್ಚರಿಸಿದರು.

ಕಳೆದ ಫೆಬ್ರವರಿಯಲ್ಲಿ ಉಕ್ರೇನ್ ಮೇಲೆ ರಶ್ಯ ಆಕ್ರಮಣ ನಡೆಸಿದಂದಿನಿಂದ 3ನೇ ಪರಮಾಣು ಬಾಂಬ್ ದಾಳಿಯ ಆತಂಕ ಹೆಚ್ಚಿದೆ. ಎರಡನೇ ವಿಶ್ವಯುದ್ಧದ ಸಂದರ್ಭ , 1945ರ ಆಗಸ್ಟ್ 6ರಂದು ಅಮೆರಿಕವು ವಿಶ್ವದ ಪ್ರಥಮ ಪರಮಾಣು ಬಾಂಬ್ ಅನ್ನು ಜಪಾನ್ನ ಹಿರೋಷಿಮಾ ನಗರದ ಮೇಲೆ ಹಾಕಿದ್ದು 1,40,000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು.

3 ದಿನದ ಬಳಿಕ ಜಪಾನ್ನ ಮತ್ತೊಂದು ನಗರ ನಗಾಸಾಕಿಯ ಮೇಲೆ ಹಾಕಿದ ಪರಮಾಣು ಬಾಂಬ್ನಲ್ಲಿ 70,000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು. 1945ರ ಆಗಸ್ಟ್ 15ರಂದು ಜಪಾನ್ ಶರಣಾಗುವುದರೊಂದಿಗೆ ದ್ವಿತೀಯ ವಿಶ್ವಯುದ್ಧ ಅಂತ್ಯಗೊಂಡಿತ್ತು.

ವಿಶ್ವದ ಪ್ರಥಮ ಪರಮಾಣು ಬಾಂಬ್ ದುರಂತದ 70ನೇ ವಾರ್ಷಿಕೋತ್ಸವ ಸಂದರ್ಭ ಗುಟೆರಸ್ ಉಕ್ರೇನ್, ಮಧ್ಯಪ್ರಾಚ್ಯ ಮತ್ತು ಕೊರಿಯನ್ ಪರ್ಯಾಯ ದ್ವೀಪದ ಬಿಕ್ಕಟ್ಟನ್ನು ಉಲ್ಲೇಖಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News