ವಿದ್ಯುತ್ (ತಿದ್ದುಪಡಿ) ಮಸೂದೆ 2022 ವಿರುದ್ಧ ಇಂದು 27 ಲಕ್ಷ ಉದ್ಯೋಗಿಗಳು, ಎಂಜಿನಿಯರ್‌ಗಳಿಂದ ಪ್ರತಿಭಟನೆ

Update: 2022-08-08 08:58 GMT

ಹೊಸದಿಲ್ಲಿ: ವಿದ್ಯುತ್ ವಲಯದ ಸುಮಾರು 27 ಲಕ್ಷ ಉದ್ಯೋಗಿಗಳು ಹಾಗೂ  ಎಂಜಿನಿಯರ್‌ಗಳು ಸೋಮವಾರ ವಿದ್ಯುತ್ (ತಿದ್ದುಪಡಿ) ಮಸೂದೆ 2022 ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ.

ಅಖಿಲ ಭಾರತ ಪವರ್ ಇಂಜಿನಿಯರ್ಸ್ ಫೆಡರೇಶನ್ (ಎಐಪಿಇಎಫ್) ಯ ಹೇಳಿಕೆಯ ಪ್ರಕಾರ, ಒಂದೇ ಪ್ರದೇಶದಲ್ಲಿ ಒಂದಕ್ಕಿಂತ ಹೆಚ್ಚು ವಿತರಣಾ ಕಂಪನಿಗಳಿಗೆ ಪರವಾನಗಿ ನೀಡಲು ಮಸೂದೆ ಅವಕಾಶ ನೀಡುತ್ತದೆ. , ಇದು ಖಾಸಗಿ ಕಂಪನಿಗಳಿಗೆ ಅನುಕೂಲವಾಗುತ್ತದೆ ಹಾಗೂ ಸರಕಾರಿ ಡಿಸ್ಕಾಮ್‌ಗಳಿಗೆ ಹಾನಿ ಮಾಡುತ್ತದೆ.

ಕೇಂದ್ರ ವಿದ್ಯುತ್ ಸಚಿವ ಆರ್.ಕೆ. ಸಿಂಗ್ ಆಗಸ್ಟ್ 8 ರಂದು ಲೋಕಸಭೆಯಲ್ಲಿ ವಿದ್ಯುಚ್ಛಕ್ತಿ (ತಿದ್ದುಪಡಿ) ಮಸೂದೆ 2022 ಅನ್ನುಪರಿಚಯಿಸುತ್ತಿರುವುದನ್ನು ಪ್ರತಿಭಟಿಸಿ  ದೇಶದ ಎಲ್ಲಾ 27 ಲಕ್ಷ ವಿದ್ಯುತ್ ನೌಕರರು ಹಾಗೂ  ಇಂಜಿನಿಯರ್‌ಗಳು ಆಗಸ್ಟ್ 08 ರಂದು ಕೆಲಸ ಬಿಟ್ಟು ದಿನವಿಡೀ ಪ್ರತಿಭಟನೆ ನಡೆಸಲಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News