ರೂ. 12,000ಕ್ಕಿಂತ ಕಡಿಮೆ ಬೆಲೆಯ ಚೀನೀ ಸ್ಮಾರ್ಟ್‍ಫೋನ್‍ಗಳ ಮಾರಾಟಕ್ಕೆ ನಿರ್ಬಂಧ ಹೇರಲು ಸರಕಾರದ ಚಿಂತನೆ; ವರದಿ

Update: 2022-08-08 12:06 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ರೂ. 12000 ಅಥವಾ ಅದಕ್ಕಿಂತ ಕಡಿಮೆ ಬೆಲೆಯ ಚೀನೀ ಸ್ಮಾರ್ಟ್ ಫೋನ್‍ (Chinese Phones)ಗಳ ಮಾರಾಟವನ್ನು ಭಾರತದಲ್ಲಿ ನಿರ್ಬಂಧಿಸುವ ಕುರಿತು ಸರಕಾರ ಚಿಂತನೆ ನಡೆಸಿದ್ದು, ದೇಶೀಯ ನಿರ್ಮಿತ ಮೊಬೈಲ್ ಫೋನ್‍ಗಳಿಗೆ ಬೇಡಿಕೆ ಹೆಚ್ಚಾಗುವಂತೆ ಮಾಡುವ ಉದ್ದೇಶ ಇದರ ಹಿಂದೆ ಇದೆ ಎಂದು ವರದಿಯಾಗಿದೆ.

ಸರಕಾರ ಈ ನಿಟ್ಟಿನಲ್ಲಿ ಕ್ರಮಕೈಗೊಂಡಿದ್ದೇ ಆದಲ್ಲಿ ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಪಾರಮ್ಯ ಸಾಧಿಸಿರುವ ಕ್ಸಿಯೋಮಿ ಸಹಿತ ಹಲವು ಇತರ ಚೀನೀ ಬ್ರ್ಯಾಂಡ್‍ಗಳಿಗೆ ದೊಡ್ಡ ಹೊಡೆತ ಬೀಳಲಿದೆ.

ಭಾರತದಲ್ಲಿ ರೂ. 12000ಕ್ಕಿಂತ ಕಡಿಮೆ ಬೆಲೆಯ ಸ್ಮಾರ್ಟ್ ಫೋನುಗಳ ಮಾರಾಟ ಒಟ್ಟು ಮಾರಾಟದ ಮೂರನೇ ಒಂದಂಶದಷ್ಟಿದೆ. ಹಾಗೂ ಜೂನ್ ತ್ರೈಮಾಸಿಕದಲ್ಲಿ ಮಾರಾಟವಾದ ಈ ಶ್ರೇಣಿಯ ದರದ ಫೋನುಗಳ ಪೈಕಿ ಶೇ 80ರಷ್ಟು ಚೀನೀ ಸ್ಮಾರ್ಟ್ ಫೋನ್‍ಗಳಾಗಿವೆ.

ಸರಕಾರವು ರೂ. 12000ಕ್ಕಿಂತ ಕಡಿಮೆ ಬೆಲೆಯ ವಿದೇಶಿ ಕಂಪೆನಿಗಳ ಫೋನ್‍ಗಳಿಗೆ ನಿರ್ಬಂಧ ವಿಧಿಸಿದರೂ ಅದು ಆ್ಯಪಲ್ ಅಥವಾ ಸ್ಯಾಮ್ಸಂಗ್ ಫೋನ್ ಕಂಪೆನಿಗಳನ್ನು ಬಾಧಿಸುವ ಸಾಧ್ಯತೆಯಿಲ್ಲ. ಈ ಕಂಪೆನಿಗಳ ಫೋನ್‍ಗಳಬೆಲೆ ರೂ. 12000ಕ್ಕಿಂತ ಹೆಚ್ಚಾಗಿರುವುದೇ ಇದಕ್ಕೆ ಕಾರಣ.

ಚೀನೀ ಸ್ಮಾರ್ಟ್ ಫೋನ್‍ಗಳು ದೇಶದ ಮಾರುಕಟ್ಟೆಗೆ ಲಗ್ಗೆಯಿಡುವ ಮೊದಲು ದೇಶೀಯ ಬ್ರ್ಯಾಂಡ್‍ಗಳಾದ ಲಾವಾ ಮತ್ತು ಮೈಕ್ರೋಮ್ಯಾಕ್ಸ್ ಇವುಗಳು ದೇಶದ ಮೊಬೈಲ್ ಫೋನ್ ಮಾರುಕಟ್ಟೆಯ ಶೇ 50ರಷ್ಟು ಪಾಲನ್ನು ತಮ್ಮದಾಗಿಸಿಕೊಂಡಿದ್ದವು.

ಇದನ್ನೂ ಓದಿ: ಪರಿಹಾರ ವಿತರಣೆಯಲ್ಲಿ ತಾರತಮ್ಯ ಮಾಡಿಲ್ಲ: ಸಿಎಂ ಸ್ಪಷ್ಟನೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News