ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ | ಬಂಧಿತ ಇಬ್ಬರು ಆರೋಪಿಗಳನ್ನು ಸುಳ್ಯ ಎಸ್.ಡಿ.ಪಿ.ಐ. ಕಚೇರಿಗೆ ತಂದು ಮಹಜರು

Update: 2022-08-09 06:02 GMT
ಬಂಧಿತ ಆರೋಪಿಗಳಾದ ನೌಫಲ್ ಮತ್ತು ಆಬಿದ್

ಸುಳ್ಯ, ಆ.9: ದ.ಕ. ಜಿಲ್ಲಾ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ರವಿವಾರ ಬಂಧಿತ ಇಬ್ಬರು ಆರೋಪಿಗಳನ್ನು ಪೊಲೀಸರು ಸುಳ್ಯದ ಎಸ್.ಡಿ.ಪಿ.ಐ. ಕಚೇರಿಗೆ ತಂದು ಮಹಜರು ನಡೆಸಿದ್ದಾರೆ.

ರವಿವಾರ ಬಂಧಿತ ಆರೋಪಿಗಳಾದ ಸುಳ್ಯ ನಾವೂರು ನಿವಾಸಿ ಆಬಿದ್ ಮತ್ತು ಬೆಳ್ಳಾರೆ ಗೌರಿಹೊಳೆ ನಿವಾಸಿ ನೌಫಲ್ ಎಂಬವರನ್ನು ಡಿವೈಎಸ್ಪಿ ಗಾನಾ ಕುಮಾರಿ ನೇತೃತ್ವದ ಪೊಲೀಸರು ಸೋಮವಾರ ಬೆಳಗ್ಗೆ ಆಲೆಟ್ಟಿ ನಗರದ ಕ್ರಾಸ್ ನಲ್ಲಿರುವ ಎಸ್.ಡಿ.ಪಿ.ಐ. ಕಚೇರಿಗೆ ಕರೆತಂದು ಮಹಜರು ನಡೆಸಿದ್ದಾರೆ. ಈ ವೇಳೆ ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು.

ಬಳಿಕ ಸುಳ್ಯ ಮತ್ತು ಬೆಳ್ಳಾರೆಯ ವಿವಿಧ ಸ್ಥಳಗಳಿಗೆ ಕರೆದೊಯ್ದು ಮಹಜರು ನಡೆಸಿದ್ದಾರೆ.

ಆರೋಪಿಗಳಿಗೆ ನ್ಯಾಯಾಂಗ ಬಂಧನ

ಆಬಿದ್ ಮತ್ತು ನೌಫಲ್ ನನ್ನು ಸೋಮವಾರ ಸಂಜೆ ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆ.12ರ ತನಕ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಧೀಶರು ಆದೇಶಿಸಿದ್ದಾರೆ.

ಜು.26ರಂದು ರಾತ್ರಿ ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಅವರನ್ನು ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದರು. ಪ್ರಕರಣಕ್ಕೆ ಸಂಬಂಧಿ ಈ ವರೆಗೆ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

 ಇದನ್ನೂ ಓದಿ: 'ಅಯೋಧ್ಯೆಯಲ್ಲಿ ಬಿಜೆಪಿ ಪಕ್ಷವೇ ರಾಮನಿಗೆ ಮಾಡಿದ ಅವಮಾನ ಅಮಿತ್ ಶಾಗೆ ತಿಳಿಯಲಿಲ್ಲವೇ?': ಕಾಂಗ್ರೆಸ್ ಪ್ರಶ್ನೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News