ಆ.12ರಂದು ಕುಡ್ಲ ಸಿಟಿಯಲ್ಲಿ ಉದ್ಯೋಗ ಮೇಳ

Update: 2022-08-09 09:45 GMT

ಮಂಗಳೂರು, ಆ.9: ಯೆನೆಪೊಯ ಪದವಿ ಕಾಲೇಜು, ಮಂಗಳೂರು ಮತ್ತು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಮಂಗಳೂರು ಅವರ ಸಂಯುಕ್ತ ಆಶ್ರಯದಲ್ಲಿ ಖಾಸಗಿ ಕಂಪೆನಿಗಳಿಂದ 'ಉದ್ಯೋಗ ಮೇಳ'ವನ್ನು ಆ.12ರಂದು ಆಯೋಜಿಸಲಾಗಿದೆ.

ಅಂದು ಬೆಳಗ್ಗೆ 10ರಿಂದ ಅಪರಾಹ್ನ 3:30ರ ವರೆಗೆ ನಗರದ ಬಲ್ಮಠದಲ್ಲಿರುವ ಯೆನೆಪೊಯ ಪದವಿ ಕಾಲೇಜಿನಲ್ಲಿ ಉದ್ಯೋಗ ಮೇಳ ನಡೆಯಲಿದೆ ಎಂದು ಯೆನೆಪೊಯ ಪದವಿ ಕಾಲೇಜು ಡೀನ್, ವೈಸ್ ಪ್ರಿನ್ಸಿಪಾಲ್ ಡಾ.ಶರೀನಾ ಪಿ. ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.

ಉದ್ಯೋಗ ಮೇಳದಲ್ಲಿ ಎಸೆಸೆಲ್ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಜಿ.ಎನ್.ಎಂ., ಎ.ಎನ್.ಎಂ., ಬಿ.ಎಸ್ಸಿ ನರ್ಸಿಂಗ್, ಬಿ.ಫಾರ್ಮಾ, ಎಂ.ಫಾರ್ಮಾ ಸೇರಿದಂತೆ ಯಾವುದೇ ಪದವಿ ಮತ್ತು ಸ್ನಾತಕೋತ್ತರ ಪದವಿ ತೇರ್ಗಡೆಯಾದ ಆಸಕ್ತ ಅಭ್ಯರ್ಥಿಗಳು ಸ್ವ-ವಿವರವುಳ್ಳ ಬಯೋಡೇಟಾ ಹಾಗೂ ಆಧಾರ್ ಕಾರ್ಡ್ ಪ್ರತಿಯೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ. ಮೇಳದಲ್ಲಿ 30ಕ್ಕೂ ಅಧಿಕ ಕಂಪೆನಿಗಳು ಭಾಗವಹಿಸಲಿದ್ದು, 800 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಈ ಸಂದರ್ಭ ಕಾಲೇಜಿನ ವೈಸ್ ಪ್ರಿನ್ಸಿಪಾಲ್ ಡಾ. ಜೀವನ್ ರಾಜ್, ಉದ್ಯೋಗ ನಿಯೋಜನಾ ಅಧಿಕಾರಿ ಪವಿತ್ರಾ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News