2014ರಲ್ಲಿ ಗೆದ್ದವರು 2024ರಲ್ಲಿಯೂ ಗೆಲ್ಲುತ್ತಾರೆಯೇ?: ಪ್ರಧಾನಿಗೆ ನಿತೀಶ್ ಕುಮಾರ್ ಸವಾಲು

Update: 2022-08-10 12:45 GMT
ನಿತೀಶ್ ಕುಮಾರ್ (PTI)

ಪಾಟ್ನಾ: ಬಿಜೆಪಿ(BJP) ಜೊತೆಗೆ ಮೈತ್ರಿ ಮುರಿದುಕೊಂಡ ಬೆನ್ನಲ್ಲೇ ತನ್ನ ಹಳೆಯ ಮಿತ್ರ ಪಕ್ಷವಾಗಿರುವ ಆರ್‍ಜೆಡಿ(RJD) ಜೊತೆಗೆ ಮೈತ್ರಿ ಸಾಧಿಸಿ ರಾಜ್ಯದ ಮುಖ್ಯಮಂತ್ರಿಯಾಗಿ ಎಂಟನೇ ಬಾರಿಗೆ ಅಧಿಕಾರ ವಹಿಸಿಕೊಂಡ ನಿತೀಶ್ ಕುಮಾರ್(Nitish Kumar), ಪ್ರಧಾನಿ ನರೇಂದ್ರ ಮೋದಿ(Narendra Modi )ಗೆ ನೇರ ಸವಾಲೆಸೆದಿದ್ದಾರೆ. "ಅವರು 2014ರಲ್ಲಿ ಗೆದ್ದಿದ್ದರು, ಆಧರೆ 2024ರಲ್ಲಿ ಗೆಲ್ಲುತ್ತಾರೆಯೇ?'' ಎಂದು ಅವರು ಪ್ರಶ್ನಿಸಿದ್ದಾರೆ.

ವಿಪಕ್ಷಗಳ ಏಕತೆಯ ಅಗತ್ಯವನ್ನು ಒತ್ತಿ ಹೇಳಿದ ನಿತೀಶ್ ಕುಮಾರ್, ಅದೇ ಸಮಯ ತಾವು ಯಾವುದೇ ಹುದ್ದೆಗೆ ಸ್ಪರ್ಧೆಯಲ್ಲಿಲ್ಲ ಎಂದು ಹೇಳಿದರು. ನೀವು ಪ್ರಧಾನಿ ಅಭ್ಯರ್ಥಿಯಾಗಲು ಬಯಸುತ್ತೀರಾ ಎಂಬ ಪ್ರಶ್ನೆಗೆ ಅವರು ಮೇಲಿನಂತೆ ಪ್ರತಿಕ್ರಿಯಿಸಿದರು. "2014ರಲ್ಲಿ ಅಧಿಕಾರಕ್ಕೆ ಬಂದ ವ್ಯಕ್ತಿ, 2024ರಲ್ಲಿಯೂ ಗೆಲ್ಲುತ್ತಾರೆಯೇ ಎಂಬ ಪ್ರಶ್ನೆ ಈಗ ಇದೆ,'' ಎಂದು ಅವರು ಹೇಳಿದರು.

2020 ವಿಧಾನಸಭಾ ಚುನಾವಣೆ ನಂತರ ತಮಗೆ ಮುಖ್ಯಮಂತಿ ಆಗುವ ಇಚ್ಛೆಯಿರಲಿಲ್ಲ ಎಂದು ಅವರು ಹೇಳಿದರು. "ಜೆಡಿಯು ಮಂದಿಯ ಬಳಿ ಕೇಳಿ, ನನಗೆ ಸಿಎಂ ಆಗುವುದು ಬೇಕಿರಲಿಲ್ಲ, ಆದರೆ ನನ್ನ ಮೇಲೆ ಒತ್ತಡ ಹೇರಲಾಯಿತು. ಮತ್ತೆ ಏನಾಯಿತೆಂದು ನೀವು ನೋಡಿದ್ದೀರಿ. ಎರಡು ತಿಂಗಳಿನಿಂದ ನಿಮ್ಮ ಬಳಿಯೂ ಮಾತನಾಡಿಲ್ಲ,'' ಎಂದರು.

"2015ರಲ್ಲಿ ನಾವೆಷ್ಟು ಸೀಟುಗಳನ್ನು ಗೆದ್ದಿದ್ದೆವು? ಮುಂದೆ ಅದೇ ಜನರೊಂದಿಗೆ ಮತ್ತೆ ಚುನಾವಣೆ ಎದುರಿಸಿದಾಗ ನಮಗೆ ಸಿಕ್ಕಿದ್ದೆಷ್ಟು? ಬಿಜೆಪಿ ತನ್ನ ಮಿತ್ರ ಪಕ್ಷಗಳನ್ನು ಉರುಳಿಸಲು ಹಾಗೂ ಪ್ರಾದೇಶಿಕ ಪಕ್ಷಗಳನ್ನು ಮುಗಿಸಲು ಬಯಸುತ್ತಿದೆ ಎಂದು ಜೆಡಿಯು ಪಕ್ಷದ ತೇಜಸ್ವಿ ಯಾದವ್ ಕೂಡ ಹೇಳಿದ್ದಾರೆ,'' ಎಂದು ನಿತೀಶ್ ಹೇಳಿದರು.

2015 ಚುನಾವಣೆಯಲ್ಲಿ ಜೆಡಿಯು 71 ಸ್ಥಾನಗಳನ್ನು ಗಳಿಸಿದ್ದರೆ, 2020 ಚುನವಣೆಯಲ್ಲಿ 45 ಸ್ಥಾನಗಳನ್ನು ಗಳಿಸಿತ್ತು.

ಇದನ್ನೂ ಓದಿ: 2024ರ ಲೋಕಸಭಾ ಚುನಾವಣೆಗೆ ನಿತೀಶ್ ಕುಮಾರ್ ವಿಪಕ್ಷಗಳ ಪ್ರಧಾನಿ ಅಭ್ಯರ್ಥಿ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News