ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣ: ಪ.ಬಂಗಾಳದ ಎಂಟು ಪೊಲೀಸ್ ಅಧಿಕಾರಿಗಳಿಗೆ ಈ.ಡಿ.ಸಮನ್ಸ್

Update: 2022-08-11 15:19 GMT
ಸಾಂದರ್ಭಿಕ ಚಿತ್ರ (PTI)

ಕೋಲ್ಕತಾ,ಆ.11: ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣದಲ್ಲಿ ವಿಚಾರಣೆಗಾಗಿ ದಿಲ್ಲಿಯಲ್ಲಿ ತನ್ನೆದುರು ಹಾಜರಾಗುವಂತೆ ಜಾರಿ ನಿರ್ದೇಶನಾಲಯ (ಈ.ಡಿ)ವು ಪಶ್ಚಿಮ ಬಂಗಾಳದ ಎಂಟು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸಮನ್ಸ್ ಹೊರಡಿಸಿದೆ.

ಈ.ಡಿ.ಯಿಂದ ಸಮನ್ಸ್ ಪಡೆದಿರುವ ಐಪಿಎಸ್ ಅಧಿಕಾರಿಗಳಲ್ಲಿ ಜ್ಞಾನವಂತ ಸಿಂಗ್ (ಎಡಿಜಿ,ಸಿಐಡಿ),ಕೋಟೇಶ್ವರ ರಾವ್, ಎಸ್.ಸೆಲ್ವಮುರುಗನ್,ಶ್ಯಾಮಸಿಂಗ್,ರಾಜೀವ್ ಮಿಶ್ರಾ,‌ ಸುಕೇಶ್ ಕುಮಾರ್ ಜೈನ್ ಮತ್ತು ತಥಾಗತ ಬಸು ಅವರು ಸೇರಿದ್ದಾರೆ.
ಜಾರಿ ನಿರ್ದೇಶನಾಲಯದ ದಿಲ್ಲಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಲು ಈ ಐಪಿಎಸ್ ಅಧಿಕಾರಿಗಳಿಗೆ ನಿರ್ದಿಷ್ಟ ದಿನಾಂಕಗಳನ್ನು ನೀಡಲಾಗಿದೆ.

ಈ ಐಪಿಎಸ್ ಅಧಿಕಾರಿಗಳು ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣದಲ್ಲಿ ಪ್ರಮುಖ ಪಾತ್ರಗಳನ್ನು ವಹಿಸಿದ್ದರು. ಹಗರಣದಿಂದ ಈ ಅಧಿಕಾರಿಗಳು ಲಾಭ ಮಾಡಿಕೊಂಡಿರುವುದಕ್ಕೆ ಸಾಕ್ಷಾಧಾರಗಳಿವೆ. ಈ ಎಲ್ಲ ಅಧಿಕಾರಿಗಳು ಕಳ್ಳಸಾಗಣೆ ನಡೆದಿದ್ದ ಪ್ರದೇಶದಲ್ಲಿ ನಿಯೋಜಿತರಾಗಿದ್ದರು ಎಂದು ಈ.ಡಿ.ಅಧಿಕಾರಿಯೋರ್ವರು ತಿಳಿಸಿದರು. ಈ.ಡಿ.ಈ ಅಧಿಕಾರಿಗಳ ಪೈಕಿ ಏಳು ಜನರನ್ನು ವಿಚಾರಣೆಗಾಗಿ ಕಳೆದ ವರ್ಷವೂ ಕರೆಸಿಕೊಂಡಿತ್ತು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News