ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಭಾರತೀಯ ತಂಡ

Update: 2022-08-13 06:50 GMT
Photo:twitter

ಹೊಸದಿಲ್ಲಿ: ಇತ್ತೀಚೆಗೆ ಮುಕ್ತಾಯಗೊಂಡ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ದೇಶವನ್ನು ಪ್ರತಿನಿಧಿಸಿದ್ದ ಭಾರತೀಯ  ತಂಡ  (Commonwealth Games contingent )ಶನಿವಾರ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi )ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದೆ.

ಭಾರತದ ತಂಡ  22 ಚಿನ್ನ ಸೇರಿದಂತೆ  ಒಟ್ಟು 61 ಪದಕಗಳೊಂದಿಗೆ ಮೆಗಾ ಈವೆಂಟ್ ಅನ್ನು ಕೊನೆಗೊಳಿಸಿತು. ಪಿ.ವಿ. ಸಿಂಧು, ಬಜರಂಗ್ ಪುನಿಯಾ, ವಿನೇಶ್ ಫೋಗಟ್ ಮತ್ತು ಲಕ್ಷ್ಯ ಸೇನ್ ಅವರಂತಹ ತಾರೆಯರು ಚಿನ್ನದ ಪದಕವನ್ನು ಗೆದ್ದಿದ್ದಾರೆ.

ಭಾರತೀಯ ಕ್ರೀಡಾ ಪ್ರಾಧಿಕಾರದ (SAI) ಅಧಿಕೃತ ಟ್ವಿಟರ್ ಹ್ಯಾಂಡಲ್ ಶನಿವಾರ ಪ್ರಧಾನಿ ಮೋದಿ ಅವರನ್ನು ಅವರ ಮನೆಯಲ್ಲಿ ಭೇಟಿಯಾಗಲು ಕ್ರೀಡಾಳುಗಳು ತಯಾರಾಗುತ್ತಿರುವ ಚಿತ್ರಗಳನ್ನು ಹಾಕಿದೆ.

ಆಸ್ಟ್ರೇಲಿಯಾ ವಿರುದ್ಧದ ಚಿನ್ನದ ಪದಕದ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ತಂಡವು ಸೋತ ನಂತರ ಭಾರತ ಮಹಿಳಾ ಕ್ರಿಕೆಟ್ ತಂಡ ಬೆಳ್ಳಿ ಪದಕ ಗೆದ್ದಿತ್ತು.

ನ್ಯೂಝಿಲ್ಯಾಂಡ್ ತಂಡವನ್ನು ಸೋಲಿಸಿದ್ದ ಮಹಿಳೆಯರ ಹಾಕಿ ತಂಡ ಕಂಚು ಗೆದ್ದರೆ,  ಪುರುಷರ ಹಾಕಿ ತಂಡ ಬೆಳ್ಳಿ ಗೆದ್ದಿತು.

ಭಾರತ 22 ಚಿನ್ನ, 16 ಬೆಳ್ಳಿ ಹಾಗೂ  23 ಕಂಚಿನ ಪದಕಗಳೊಂದಿಗೆ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಒಟ್ಟು 61 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ 4 ನೇ ಸ್ಥಾನ ಗಳಿಸಿತು.

ಭಾರತವು ತನ್ನ ಕಾಮನ್‌ವೆಲ್ತ್ ಕ್ರೀಡಾಕೂಟದ ಇತಿಹಾಸದಲ್ಲಿ ಸಾರ್ವಕಾಲಿಕ ತನ್ನ ಐದನೇ ಅತ್ಯುತ್ತಮ ಪ್ರದರ್ಶನವನ್ನು ನೀಡಿತು. 2010 ರಲ್ಲಿ ಸ್ವದೇಶದಲ್ಲಿ ಗೇಮ್ಸ್  ನಡೆದಾಗ ಒಟ್ಟು 101 ಪದಕಗಳನ್ನು ಗೆದ್ದಿರುವುದು ಭಾರತದ ಅತ್ಯುತ್ತಮ ಪ್ರದರ್ಶನವಾಗಿತ್ತು.

ಭಾರತದ ಅತ್ಯಂತ ಯಶಸ್ವಿ ಕ್ರೀಡೆಯಾಗಿರುವ ಶೂಟಿಂಗ್ ಅನ್ನು ಈ ಬಾರಿ ಗೇಮ್ಸ್ ಗಳಲ್ಲಿ ಸೇರಿಸಿಕೊಳ್ಳದ ಕಾರಣ ಈ ಬಾರಿ 61 ಪದಕಗಳನ್ನು ಗೆದ್ದಿರುವುದು ಬಹಳಷ್ಟು ಮಹತ್ವವನ್ನು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News