ಮಕ್ಕಾದ ಗ್ರ್ಯಾಂಡ್ ಮಸೀದಿ ಪ್ರವೇಶಕ್ಕೆ 5 ವರ್ಷದೊಳಗಿನ ಮಕ್ಕಳಿಗೆ ಪರ್ಮಿಟ್ ಅಗತ್ಯವಿಲ್ಲ

Update: 2022-08-13 16:40 GMT

ರಿಯಾದ್, ಆ.13: ಮಕ್ಕಾದ ಗ್ರ್ಯಾಂಡ್ ಮಸೀದಿ ಪ್ರವೇಶಕ್ಕೆ 5 ವರ್ಷದೊಳಗಿನ ಮಕ್ಕಳಿಗೆ ಪರ್ಮಿಟ್ನ ಅಗತ್ಯವಿಲ್ಲ ಎಂದು ಸೌದಿ ಅರೆಬಿಯಾದ ಹಜ್ ಮತ್ತು ಉಮ್ರಾ ಸಚಿವಾಲಯ ಶನಿವಾರ ಹೇಳಿದೆ. ಪೋಷಕರು ತಮ್ಮ 5 ವರ್ಷದೊಳಗಿನ ಮಕ್ಕಳನ್ನು ಪರ್ಮಿಟ್ನ ಅಗತ್ಯವಿಲ್ಲದೆ ಕರೆದುಕೊಂಡು ಹೋಗಬಹುದು. ‌

ಆದರೆ 5 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ಪವಿತ್ರ ಮಸೀದಿ ಪ್ರವೇಶಕ್ಕೆ ‘ಈತ್ಮಾರ್ನ’ ಆ್ಯಪ್ ಮೂಲಕ ಪರ್ಮಿಟ್ ಅನ್ನು ಪಡೆದುಕೊಳ್ಳಬಹುದು ಎಂದು ಸಚಿವಾಲಯ ಟ್ವೀಟ್ ಮಾಡಿದೆ. ಎಲ್ಲಾ ವಿಧದ ವೀಸಾಗಳನ್ನು ಹೊಂದಿರುವವರು ದೇಶದಲ್ಲಿ ತಮ್ಮ ವಾಸ್ತವ್ಯದ ಸಂದರ್ಭ ಉಮ್ರಾ ನಿರ್ವಹಿಸಬಹುದು ಎಂದು ಇದಕ್ಕೂ ಮುನ್ನ ಸೌದಿ ಅರೆಬಿಯಾ ಘೋಷಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News