ಕೈ ಮುರಿಯಲು ಸಾಧ್ಯವಾಗದಿದ್ದರೆ, ಕಾಲು ಮುರಿಯಿರಿ, ನಾನು ನಿಮಗೆ ಜಾಮೀನು ಕೊಡಿಸುವೆ: ಶಿವಸೇನೆ ಶಾಸಕ

Update: 2022-08-16 07:55 GMT

ಮುಂಬೈ: "ನಿಮಗೆ ಅವರ ಕೈ ಮುರಿಯಲು ಸಾಧ್ಯವಾಗದಿದ್ದರೆ, ಅವರ ಕಾಲು ಮುರಿಯಿರಿ. ನಾನು ನಿಮಗೆ ಜಾಮೀನು ಕೊಡಿಸಲು ಮರುದಿನ ಬರುತ್ತೇನೆ’’ ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಬೆಂಬಲಿಸುವ ಶಿವಸೇನೆ ಶಾಸಕರಲ್ಲಿ(Shivasena mla) ಒಬ್ಬರಾದ ಶಾಸಕ ಪ್ರಕಾಶ್ ಸುರ್ವೆ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದು, ಉದ್ಧವ್ ಠಾಕ್ರೆ ಅವರ ಶಿವಸೇನೆ  ಶಾಸಕನ ವಿರುದ್ಧ  ಪೊಲೀಸ್ ದೂರು ಸಲ್ಲಿಸಿದೆ.

ಉದ್ಧವ್ ಠಾಕ್ರೆ ಅವರನ್ನು ಪದಚ್ಯುತಗೊಳಿಸಲು ಶಿಂಧೆ ಬಂಡಾಯ ಎದ್ದಾಗ  ಶಿಂಧೆಗೆ ಬೆಂಬಲಿಸಿದ್ದ  ಸುರ್ವೆ,  ಉದ್ಧವ್ ಠಾಕ್ರೆ  ಅಥವಾ ಶಿಂಧೆ ಅವರ ನಾಯಕತ್ವದ  ಶಿವಸೇನೆಯಲ್ಲಿ ಯಾವುದು ನಿಜವಾದ ಶಿವಸೇನೆ ಎಂಬ ವಿಚಾರದ ಕುರಿತು ಮಾತನಾಡುತ್ತಿದ್ದರು.

ಸುರ್ವೆ ಅವರ ಭಾಷಣದ ವೀಡಿಯೊ ತುಣುಕುಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಅವರು ಆಗಸ್ಟ್ 14 ರಂದು ಮುಂಬೈನ ಮಗಥಾಣೆ ಪ್ರದೇಶದ ಕೊಕನಿ ಪಾಡದ ಬುದ್ಧ ವಿಹಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯಾರಾದರೂ ನಿಮಗೆ ಏನಾದರೂ ಹೇಳಿದರೆ ಅವರಿಗೆ ಉತ್ತರಿಸಿ . ಯಾರ ದಾದಾಗಿರಿ ಸಹಿಸುವುದಿಲ್ಲ, ನೀವು ಅವರಿಗೆ ಥಳಿಸಿ. ನಾನು, ಪ್ರಕಾಶ್ ಸುರ್ವೆ, ನಿಮಗಾಗಿ ಇಲ್ಲಿದ್ದೇನೆ. ನಿಮಗೆ ಅವರ ತೋಳುಗಳನ್ನು ಮುರಿಯಲು ಸಾಧ್ಯವಾಗದಿದ್ದರೆ, ಅವರ  ಕಾಲುಗಳನ್ನು ಮುರಿಯಿರಿ. ಮರುದಿನ ನಾನು ನಿಮಗೆ ಜಾಮೀನು ನೀಡುತ್ತೇನೆ, ಚಿಂತಿಸಬೇಡಿ ಎಂದು ನೆರೆದಿದ್ದ ಜನರಿಗೆ ಸುರ್ವೆ ಹೇಳುತ್ತಿರುವುದು ವೀಡಿಯೊದಲ್ಲಿದೆ.

ಈ ಹೇಳಿಕೆಯನ್ನು ಪ್ರತಿಭಟಿಸಿ ಇದೀಗ ಠಾಕ್ರೆ ಬಣವು ದಹಿಸರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News