ಖಿದ್ಮತ್ ಫೌಂಡೇಶನ್ ವಿಟ್ಲದಿಂದ ಸ್ವಾತಂತ್ರ್ಯೋತ್ಸವ

Update: 2022-08-16 12:54 GMT

ಬಂಟ್ವಾಳ, ಆ.16: ಬದುಕಿನಲ್ಲಿ ಮಾನವೀಯ ಮೌಲ್ಯ ಗಳನ್ನು ಅರಿತುಕೊಂಡು ಎಲ್ಲರೊಂದಿಗೂ ಪ್ರೀತಿಯಿಂದ ಬಾಳಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣವಾತ್ತದೆ. ಆಗ ನಾವು ಆಚರಿಸುವ ಸ್ವಾತಂತ್ರ್ಯಕ್ಕೆ ನಿಜವಾದ ಅರ್ಥ ಬರುತ್ತದೆ ಎಂದು ಸಮಾಜ ಸೇವಕ ಡಾ. ರವಿಶಂಕರ್ ಸಿ.ಜೆ. ಅಭಿಪ್ರಾಯ ಪಟ್ಟರು. 

ಖಿದ್ಮತ್ ಫೌಂಡೇಶನ್ ವಿಟ್ಲ ಇದರ ವತಿಯಿಂದ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ವಿಟ್ಲ ಗಜಾನನ ಸಭಾ ಭವನದಲ್ಲಿ ನಡೆದ ಸ್ನೇಹ ಕೂಟ ಹಾಗೂ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ  ಅವರು ಮಾತನಾಡಿದರು. 

'ಉದ್ಯಮ ಉತ್ತಮ ಸಮಾಜ ಸೇವೆ' ಎಂಬ ವಿಷಯದಲ್ಲಿ ಗೌರವ ಡಾಕ್ಟರೇಟ್ ಪದವಿ ಪಡೆದ ರವಿಶಂಕರ್ ಸಿ.ಜಿ. ಅವರನ್ನು ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ವಕ್ಪ್ ಸಲಹಾ ಸಮಿತಿ ದ.ಕ. ಜಿಲ್ಲಾ ಸದಸ್ಯರಾಗಿ ಆಯ್ಕೆಯಾದ ಸಿರಾಜುದ್ದೀನ್ ಸಖಾಫಿ ಅವರನ್ನು  ಸನ್ಮಾನಿಸಲಾಯಿತು.

ಖಿದ್ಮತ್ ಫೌಂಡೇಶನ್ ಉಪಾಧ್ಯಕ್ಷ  ಖಾಸಿಂ ಸಖಾಫಿ ಪ್ರಾರ್ಥನೆ ನೆರವೇರಿಸಿದರು. ಫೌಂಡೇಶನ್ ಅಧ್ಯಕ್ಷ ಹಾಜಿ ಹಮೀದ್ ಕೊಡಂಗಾಯಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಲಯನ್ಸ್ ಪ್ರಾಂತ್ಯ ಅಧ್ಯಕ್ಷ ಸುದರ್ಶನ್ ಪಡಿಯಾರ್ , ವಿಟ್ಲ ವರ್ತಕರ ಸಂಘದ ಅಧ್ಯಕ್ಷ ಬಾಬು, ನ್ಯಾಯವಾದಿಗಳಾದ ಪದ್ಮನಾಭ  ಪೂಜಾರಿ, ಡಿ.ಬಿ.ಅಬ್ದುಲ್ ಖಾದರ್, ವಿಟ್ಲ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ ರಮನಾಥ ವಿಟ್ಲ, ಕೆಸಿಎಫ್ ರಾಷ್ಟ್ರೀಯ  ನಾಯಕ ಇಬ್ರಾಹೀಂ ಬ್ರೈಟ್ ವಿಟ್ಲ, ಎಂ.ಕೆ.ಮೂಸಾ, ವಿ.ಎಸ್.ಇಬ್ರಾಹೀಂ, ಹಸೈನಾರ್ ಹಾಜಿ, ಜಾಫರ್ ಖಾನ್ ವಿಟ್ಲ, ಇಸ್ಮಾಯೀಲ್ ಮಾಸ್ಟರ್ ಮಂಗಿಳಪದವು, ಅಬ್ದುರ್ರಹ್ಮಾನ್ ಹಾಜಿ ಒಕ್ಕೆತ್ತೂರು, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ಹಸೈನಾರ್ ನೆಲ್ಲಿಗುಡ್ಡೆ ಮೊದಲಾದವರು ಮುಖ್ಯ ಅಥಿತಿಗಳಾಗಿ ಭಾಗವಹಿಸಿದರು. 

ಖಿದ್ಮತ್ ಕಾರ್ಯದರ್ಶಿ ಸಲೀಂ ಬೈರಿಕಟ್ಟೆ ಸ್ವಾಗತಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News