ಬಾಕ್ಸ್‌ ಆಫೀಸಿನಲ್ಲಿ ಮಕಾಡೆ ಮಲಗಿದ ʼಲಾಲ್‌ ಸಿಂಗ್‌ ಚಡ್ಡಾʼ: ಆಮಿರ್‌ ಖಾನ್‌ ಸಿನಿಪಯಣದಲ್ಲಿ ನೀರಸ ಪ್ರದರ್ಶನ

Update: 2022-08-16 15:59 GMT
ಚಿತ್ರ: ಲಾಲ್‌ ಸಿಂಗ್‌ ಚಡ್ಡಾ

ಮುಂಬೈ: ಆಮಿರ್  ಖಾನ್ ಅವರ ಬಹು ನಿರೀಕ್ಷಿತ ಚಿತ್ರ ಲಾಲ್ ಸಿಂಗ್ ಚಡ್ಡಾವು ಚಿತ್ರಮಂದಿರಗಳಲ್ಲಿ ನೀರಸ ಪ್ರದರ್ಶನವನ್ನು ಕಾಣುತ್ತಿದೆ. ರಾಷ್ಟ್ರೀಯ ರಜಾದಿನಗಳ ಹಿನ್ನೆಲೆಯಲ್ಲಿ ಬಾಕ್ಸ್ ಆಫೀಸ್ ಉತ್ತಮ ಕಲೆಕ್ಷನ್‌ ಮಾಡಬಹುದೆಂದು ನಿರೀಕ್ಷಿಸಿದ್ದರೂ ಸಿನೆಮಾವು ಅತ್ಯಂತ ದಯನೀಯ ರೀತಿಯಲ್ಲಿ ಸೋಲನ್ನಪ್ಪಿದೆ ಎಂದು ವರದಿಯಾಗಿದೆ. ಆಮಿರ್‌ ಅವರ ಸಿನಿ ಬದುಕಿನಲ್ಲಿ ಕಳಪೆ ಪ್ರದರ್ಶನ ಕಂಡ ಕೆಲವೇ ಕೆಲವು ಚಿತ್ರಗಳ ಸಾಲಿನಲ್ಲಿ ಈಗ ಲಾಲ್‌ ಸಿಂಗ್‌ ಚಡ್ಡಾವು ಸೇರಿದೆ.

ಬಾಲಿವುಡ್ ಹಂಗಾಮಾ ವರದಿಯು ಚಲನಚಿತ್ರವನ್ನು 'ಝೀರೋ ನಂತರ ಖಾನ್‌ಗೆ ಅತ್ಯಂತ ಕೆಟ್ಟ ವಿಪತ್ತು' ಎಂದು ಕರೆದಿದೆ. ಅದಾಗ್ಯೂ, ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಪ್ರಕಾರ ಚಿತ್ರವು ಸೋಮವಾರ ರೂ 7.87 ಗಳಿಸಿದೆ ಎಂದು ವರದಿ TheNewIndianExpress.com ವರದಿ ಮಾಡಿದೆ.

 ಹಾಲಿವುಡ್ ಕ್ಲಾಸಿಕ್‌ ಚಿತ್ರವಾದ ಫಾರೆಸ್ಟ್ ಗಂಪ್‌ನ ಹಿಂದಿ ಅವತರಣಿಕೆಯಾಗಿರುವ ಲಾಲ್ ಸಿಂಗ್ ಚಡ್ಡಾ ಗುರುವಾರ ಬಿಡುಗಡೆಯಾಗಿದೆ. ವಾರಂತ್ಯ, ಸ್ವಾತಂತ್ರ್ಯ ದಿನ ಸೇರಿದಂತೆ  ರಕ್ಷಾ ಬಂಧನ ರಜಾದಿನವನ್ನೂ ಸಹ ಲಾಭ ಮಾಡಿಕೊಳ್ಳುವ ಗುರಿಯನ್ನು ಚಿತ್ರತಂಡವು ಹೊಂದಿತ್ತು. ಮೊದಲ ದಿನ 11.70 ಕೋಟಿ ಗಳಿಸಿದರೆ, ಶುಕ್ರವಾರ 7.26 ಕೋಟಿ, ಶನಿವಾರ 9 ಕೋಟಿ, ಭಾನುವಾರ 10 ಕೋಟಿ ಗಳಿಸಿದೆ. ಲಾಲ್ ಸಿಂಗ್ ಚಡ್ಡಾ ಚಿತ್ರದ ಒಟ್ಟು ಗಳಿಕೆಯು ಈಗ ಸುಮಾರು 46 ಕೋಟಿ ರೂ. ತಲುಪಿದೆ.

ಚಿತ್ರೀಕರಣಕ್ಕೆ ಮೂರು ವರ್ಷಗಳನ್ನು ತೆಗೆದುಕೊಂಡ  ಈ ಚಿತ್ರವು ಆಮಿರ್  ಅವರ ಕೊನೆಯ ಚಿತ್ರವಾದ 2018 ರ  ಥಗ್ಸ್ ಆಫ್ ಹಿಂದೂಸ್ತಾನ್‌ಗೆ ಸಮಾನವಾಗಿ ಹಾನಿಕಾರಕ ಫಲಿತಾಂಶವನ್ನು ಆಮಿರ್‌ ಗೆ ನೀಡಿದೆ. ಅದಾಗ್ಯೂ, ಥಗ್ಸ್‌ ಆಫ್‌ ಹಿಂದೂಸ್ಥಾನ್‌ ಚಿತ್ರದಷ್ಟೂ ಲಾಲ್‌ ಸಿಂಗ್‌ ಚಡ್ಡಾ ಚಿತ್ರ ಗಳಿಸಲಿಲ್ಲ. ಲಾಲ್‌ ಸಿಂಗ್‌ ಚಡ್ಡಾದ ಐದು ದಿನಗಳ ಒಟ್ಟು ಮೊತ್ತವನ್ನು ಥಗ್ಸ್ ಆಫ್ ಹಿಂದೂಸ್ಥಾನ್‌ ಚಿತ್ರ ಮೊದಲ ದಿನದಂದು ಬಾಚಿಕೊಂಡಿತ್ತು.
 

ಇದನ್ನೂ ಓದಿ: ಆಮಿರ್ ಖಾನ್ ಹೊಸ ಚಿತ್ರ ಲಾಲ್ ಸಿಂಗ್ ಛಡ್ಡಾದಲ್ಲಿ ಶಾರುಖ್ ಖಾನ್ !

ಬಾಲಿವುಡ್ ಹಂಗಾಮಾ ಪ್ರಕಾರ ಚಿತ್ರವು ಒಟ್ಟಾರೆ 75 ಕೋಟಿ ರೂಪಾಯಿಗಳ ಲಾಭವನ್ನಷ್ಟೇ ಮಾಡಬಹುದು.  ಹೂಡಿಕೆಯ ಮೇಲಿನ ಆದಾಯದ ಮೇಲೆ ಮಾತ್ರ, ಈ ಚಿತ್ರವು ಅಮೀರ್‌ ಖಾನ್‌ ಅವರ ಅತ್ಯಂತ ಕಳಪೆ ಚಿತ್ರವಾಗಿದೆ.

ಸಾಗರೋತ್ತರದಲ್ಲಿ, ಚಿತ್ರವು ಇಲ್ಲಿಯವರೆಗೆ ಸುಮಾರು $5 ಮಿಲಿಯನ್ (ರೂ. 39 ಕೋಟಿ) ಗಳಿಸಿದೆ. ಸೀಕ್ರೆಟ್ ಸೂಪರ್‌ಸ್ಟಾರ್ ಮತ್ತು ದಂಗಲ್‌ನ ದಾಖಲೆಯ ಬ್ಯಾಕ್-ಟು-ಬ್ಯಾಕ್ ಯಶಸ್ಸಿನೊಂದಿಗೆ ಆಮಿರ್  ಪ್ರಮುಖ ತಾರೆಯಾಗಿ ಉಳಿದಿರುವ ಚೀನಾದ ಮೇಲೆ ಸದ್ಯ ಎಲ್ಲರ ಕಣ್ಣುಗಳು ಕೇಂದ್ರೀಕೃತವಾಗಿವೆ. ಆದರೆ ಚೀನಾದ ಪ್ರೇಕ್ಷಕರು ಕೂಡ ಥಗ್ಸ್ ಆಫ್ ಹಿಂದೂಸ್ತಾನ್ ಅನ್ನು ತಿರಸ್ಕರಿಸಿದ್ದರು.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News