ಬಂಕಿಮ್‌ ಚಂದ್ರ ಚಟರ್ಜಿಯ ʼಆನಂದ ಮಠʼ ಪ್ಯಾನ್‌ ಇಂಡಿಯಾ ಚಿತ್ರವಾಗಿ ತೆರೆಗೆ

Update: 2022-08-18 11:09 GMT
Photo: 1770 Poster

ಮುಂಬೈ: ಆಕಾಶವಾಣಿ ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ್ದ ಅಶ್ವಿನ್ ಗಂಗರಾಜು ಅವರು ಮುಸ್ಲಿಮರು ಈ ದೇಶದ ವೈರಿಗಳೆಂಬಂತೆ ಚಿತ್ರಿಸಿದ್ದಾರೆ ಎಂಬ ವ್ಯಾಪಕ ಆರೋಪವಿರುವ  ಬಂಕಿಮ್ ಚಂದ್ರ ಅವರ ಬಂಗಾಳಿ ಕಾದಂಬರಿ ಆನಂದಮಠವನ್ನು ಆಧರಿಸಿ ಮುಂಬರುವ ಬಹುಭಾಷಾ ಚಲನಚಿತ್ರ ‌ʼ1770ʼ ವನ್ನು ನಿರ್ದೇಶಿಸಲು ಸಿದ್ಧರಾಗಿದ್ದಾರೆ. ನಿರ್ಮಾಪಕರು ಬುಧವಾರ ಚಿತ್ರದ ಮೋಷನ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದಾರೆ.

ಎಸ್‌ಎಸ್ 1 ಎಂಟರ್‌ಟೈನ್‌ಮೆಂಟ್ ಮತ್ತು ಪಿಕೆ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ನಡಿಯಲ್ಲಿ ಶೈಲೇಂದ್ರ ಕುಮಾರ್, ಸುಜಯ್ ಕುಟ್ಟಿ, ಕೃಷ್ಣ ಕುಮಾರ್ ಬಿ ಮತ್ತು ಸೂರಜ್ ಶರ್ಮಾ ಈ ಚಿತ್ರವನ್ನು ನಿರ್ಮಿಸಲಿದ್ದಾರೆ.  "ಇಂಥದ್ದೊಂದು ಅದ್ಭುತ ದೃಶ್ಯಕಾವ್ಯವನ್ನು ತೆರೆಗೆ ತರುವುದು ದೊಡ್ಡ ಸವಾಲು. ಆದರೆ, ರಾಜಮೌಳಿ ಅವರ ತಂದೆ ವಿ. ವಿಜಯೇಂದ್ರ ಪ್ರಸಾದ್ ಅವರು ಚಿತ್ರಕಥೆ ರಚಿಸುತ್ತಿರುವುದರಿಂದ, ಚಿತ್ರ ಅದ್ಭುತವಾಗಿ ಮೂಡಿಬರುತ್ತದೆ ಎಂಬ ವಿಶ್ವಾಸವಿದೆ. ಒಬ್ಬ ನಿರ್ದೇಶಕನಾಗಿ ಬೇರೆ ಕಾಲಘಟ್ಟದ, ಭಾವನೆಗಳು ತೀವ್ರವಾಗಿರುವಂತಹ ಹಾಗೂ ಆಕ್ಷನ್ ದೃಶ್ಯಗಳಿಗೆ ಹೆಚ್ಚು ಮಹತ್ವ ಇರುವಂತಹ ಚಿತ್ರಗಳನ್ನು ನಿರ್ದೇಶಿಸಬೇಕು ಎನ್ನುವುದು ನನ್ನ ವೈಯಕ್ತಿಕ ಆಸೆ. ಅದಕ್ಕೆ ಅನುಗುಣವಾಗಿ, ಈ ಕಥೆಯಲ್ಲಿ ಎಲ್ಲವೂ ಇದೆ. ಈ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ತೆರೆಗೆ ತರಬೇಕು ಎನ್ನುವುದು ನಿರ್ಮಾಪಕರ ಕನಸಾಗಿದ್ದು, ಆ ಕನಸನ್ನು ನನಸು ಮಾಡುವ ಜವಾಬ್ದಾರಿ ನನ್ನ ಮೇಲಿದೆ. ಅದನ್ನು ಪರಿಪೂರ್ಣವಾಗಿ ನಿಭಾಯಿಸುತ್ತೇನೆ ಎಂಬ ನಂಬಿಕೆ ನನಗಿದೆ" ಎಂದು ಅಶ್ವಿನ್ ಹೇಳಿದ್ದಾರೆ.  ಅಶ್ವಿನ್‌ ಅವರು ಈ ಹಿಂದೆ ಈಗ ಮತ್ತು ಬಾಹುಬಲಿಯಲ್ಲಿ ಎಸ್‌ಎಸ್ ರಾಜಮೌಳಿ ಅವರಿಗೆ ಸಹಾಯಕರಾಗಿ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: ಬಂಕಿಮಚಂದ್ರರ ‘ವಂದೇಮಾತರಂ’ ಮತ್ತು ‘ಹಿಂದೂ ರಾಷ್ಟ್ರ’ವಾದ

ವಿವಾದಿತ ʼವಂದೇ ಮಾತರಂʼ ಕವನವು ಮೊದಲು ಆನಂದಮಠದಲ್ಲಿ ಪ್ರಕಟವಾಗಿತ್ತು. “ವಂದೇ ಮಾತರಂ ಒಂದು ಮಾಂತ್ರಿಕ ಪದ ಎಂದು ನಾನು ಭಾವಿಸುತ್ತೇನೆ. ದಬ್ಬಾಳಿಕೆ ಮತ್ತು ಅನ್ಯಾಯದ ವಿರುದ್ಧ ರಾಷ್ಟ್ರವು ಒಂದಾಗಲು ಮಹರ್ಷಿ ಬಂಕಿಮಚಂದ್ರರು ನೀಡಿದ ಮಂತ್ರವಿದು.” ಎಂದು ಚಿತ್ರಕಥೆ ಬರೆಯುತ್ತಿರುವ ವಿಜಯೇಂದ್ರ ಪ್ರಸಾದ್‌ ಹೇಳಿದ್ದಾರೆ.

1770 ರಲ್ಲಿ, ನಾವು ಸ್ವಾತಂತ್ರ್ಯ ಚಳುವಳಿಯ ಕಿಡಿ ಹೊತ್ತಿಸಿದ ಅಪರಿಚಿತ ಯೋಧರ ಕಥೆಯೊಂದಿಗೆ ವ್ಯವಹರಿಸಿದ್ದೇವೆ. 1770 ಚಿತ್ರವು ಹಿಂದಿ, ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಬೆಂಗಾಲಿ ಭಾಷೆಗಳಲ್ಲಿ ತಯಾರಾಗಲಿದೆ. ಕಾಸ್ಟಿಂಗ್ ನಡೆಯುತ್ತಿದ್ದು, ದೀಪಾವಳಿ ವೇಳೆಗೆ ಅನೌನ್ಸ್ ಮಾಡಲಾಗುವುದು. ಸದ್ಯ ಚಿತ್ರವು ಪ್ರಿ-ಪ್ರೊಡಕ್ಷನ್ ಹಂತದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News