ನ್ಯೂಯಾರ್ಕ್ ಕ್ವೀನ್ಸ್ ಪ್ರದೇಶದ ದೇವಸ್ಥಾನದ ಹೊರಗಿದ್ದ ಮಹಾತ್ಮಾ ಗಾಂಧಿ ಪ್ರತಿಮೆ ಧ್ವಂಸ

Update: 2022-08-19 09:25 GMT
Photo: Twitter/Richard David

ಹೊಸದಿಲ್ಲಿ: ನ್ಯೂಯಾರ್ಕ್‍ನ ಕ್ವೀನ್ಸ್ ಪ್ರದೇಶದಲ್ಲಿ ದೇವಸ್ಥಾನದ ಹೊರಗೆ ಇರುವ ಮಹಾತ್ಮ ಗಾಂಧೀಜಿ(Mahathma Gandhi) ಅವರ ಪ್ರತಿಮೆಯೊಂದನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ ಘಟನೆ ಮಂಗಳವಾರ ಮುಂಜಾನೆ ನಡೆದಿದೆ. ಸುಮಾರು ಆರು ಜನರ ತಂಡವೊಂದು ಪ್ರತಿಮೆಯನ್ನು ಪುಡಿಗಟ್ಟಿದೆ ಎಂದು ದಿ ನ್ಯೂಯಾರ್ಕ್ ಪೋಸ್ಟ್(The newyork post) ವರದಿ ಮಾಡಿದೆ. ಎರಡು ವಾರಗಳ ಹಿಂದೆಯಷ್ಟೇ, ಆಗಸ್ಟ್ 3 ರಂದು  ಶ್ರೀ ತುಳಸಿ ಮಂದಿರದ(Sri Tulsi Mandir) ಹೊರಗೆ ಇರುವ ಈ ಪ್ರತಿಮೆಗೆ ಹಾನಿಯೆಸಗಲಾಗಿತ್ತು. ಆದರೆ ಮಂಗಳವಾರದ ಘಟನೆಯಲ್ಲಿ ಇಡೀ ಪ್ರತಿಮೆ ಧ್ವಂಸಗೊಂಡಿದೆ.

 ಈ ಪ್ರತಿಮೆಯನ್ನು ಈ ದೇವಸ್ಥಾನದ ಹೊರಗೆ ಸುಮಾರು ಏಳು ವರ್ಷದ ಹಿಂದೆ ಸ್ಥಾಪಿಸಲಾಗಿತ್ತು. ಈ ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ದೇವಸ್ಥಾನವಿರುವ ರಸ್ತೆಯ ಭಾಗದಲ್ಲಿ ಅಶ್ಲೀಲ ಪದಗಳನ್ನೂ ಬರೆಯಲಾಗಿದೆ.

ಈ ಘಟನೆಯ ಬಗ್ಗೆ ಶ್ರೀ ತುಳಸಿ ಮಂದಿರದ ಸ್ಥಾಪಕ ಪಂಡಿತ್ ಲಖ್ರಾಮ್ ಮಹಾರಾಜ್ ಖೇದ ವ್ಯಕ್ತಪಡಿಸಿದ್ಧಾರೆ. ಈ ಕುರಿತು ಪ್ರತಿಕ್ರಿಯಿಸಿರುವ ನ್ಯೂಯಾರ್ಕ್ ರಾಜ್ಯ ಅಸೆಂಬ್ಲಿ ಸದಸ್ಯೆ ಜೆನ್ನಿಫರ್ ರಾಜಕುಮಾರ್,  ದಾಳಿಕೋರರನ್ನು ಶೀಘ್ರ ಬಂಧಿಸಿ ಶಿಕ್ಷೆಗೊಳಪಡಿಸಬೇಕೆಂದು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News