ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಗಳ ವಾರಸುದಾರರಿಗೆ ಪರಿಹಾರ; ಅರ್ಜಿಗಳ ಆಹ್ವಾನ

Update: 2022-08-20 16:01 GMT
ಸಾಂದರ್ಭಿಕ ಚಿತ್ರ

ಉಡುಪಿ : ಕೋವಿಡ್-19 ವೈರಾಣು ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಕಾನೂನುಬದ್ಧ ವಾರಸುದಾರರು ಸರಕಾರದಿಂದ ಪರಿಹಾರ ಪಡೆಯಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಪ್ರಸಕ್ತ ಸಾಲಿನ ಮೇ 15ಕ್ಕಿಂತ ಮೊದಲು ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಗಳ ಪ್ರಕರಣದಲ್ಲಿ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲು ಆಗಸ್ಟ್ 23 ಕೊನೆಯ ದಿನವಾಗಿದ್ದು, ಮೇ ೧೬ರ ನಂತರ ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಗಳಿಗೆ ಸಂಬಂಧಿಸಿದಂತೆ ಪರಿಹಾರ ಪಡೆಯಲು 90 ದಿನಗಳ ಕಾಲಮಿತಿಯನ್ನು  ನಿಗದಿಪಡಿಸಲಾಗಿದೆ.

ಪ್ರಯೋಗಾಲಯದಿಂದ ಪಡೆದಿರುವ ಮೃತ ವ್ಯಕ್ತಿಯ ಪಾಸಿಟಿವ್ ರಿಪೋರ್ಟ್, ಸಂಬಂಧಿಸಿದ ಆಸ್ಪತ್ರೆಯ ರಿಪೋರ್ಟ್, ಕೋವಿಡ್ ದೃಢಪಟ್ಟ ರೋಗಿ ಸಂಖ್ಯೆ ದೃಢೀಕರಣ, ಮೃತರ ಆಧಾರ್ ಕಾರ್ಡ್ ಹಾಗೂ ಪಡಿತರ ಚೀಟಿ, ಮರಣ ಪ್ರಮಾಣ ಪತ್ರ ಹಾಗೂ ಅರ್ಜಿದಾರರ ಪಡಿತರ ಚೀಟಿ, ಆಧಾರ್ ಕಾರ್ಡ್ ಪ್ರತಿ ಹಾಗೂ ಬ್ಯಾಂಕ್ ಪಾಸ್‌ಬುಕ್ ಪ್ರತಿ, ಸ್ವಯಂ ಘೋಷಣಾ ಪತ್ರ ಹಾಗೂ ಕುಟುಂಬ ಸದಸ್ಯರ ನಿರಪೇಕ್ಷಣಾ ಪತ್ರದ ದಾಖಲೆ ಗಳೊಂದಿಗೆ ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಗಳ ಕಾನೂನು ಬದ್ಧ ವಾರಸುದಾರರು ತಮ್ಮ ವಾಸಸ್ಥಳ ವ್ಯಾಪ್ತಿಯ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿ, ಪರಿಹಾರ ಪಡೆಯಬಹುದಾಗಿದೆ ಎಂದು ಕಾರ್ಕಳ ತಹಶೀಲ್ದಾರ್ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News