ಮಹಿಳೆ ಮೇಲೆ ಹಲ್ಲೆ ನಡೆಸಿ ಬಂಧನಕ್ಕೊಳಗಾದ ಬಿಜೆಪಿ ಮುಖಂಡನ ಪರವಾಗಿ ಬೃಹತ್‌ ಸಮಾವೇಶ

Update: 2022-08-21 09:54 GMT

ಹೊಸದಿಲ್ಲಿ: ಕೆಲವು ದಿನಗಳ ಹಿಂದೆ ಮಹಿಳೆಯೊಬ್ಬರ ಮೇಲೆ ದೌರ್ಜನ್ಯ ಮತ್ತು ಹಲ್ಲೆ ನಡೆಸುತ್ತಿರುವುದನ್ನು ಚಿತ್ರೀಕರಿಸಿದ್ದ ರಾಜಕಾರಣಿ ಶ್ರೀಕಾಂತ್ ತ್ಯಾಗಿ ಅವರನ್ನು ಬೆಂಬಲಿಸಿ ಇಂದು ನೋಯ್ಡಾದಲ್ಲಿ ಬೃಹತ್ ರ್ಯಾಲಿಯನ್ನು ಆಯೋಜಿಸಲಾಗಿತ್ತು.

ತ್ಯಾಗಿ ಸಮುದಾಯದ ಸದಸ್ಯರು ಆಯೋಜಿಸಿದ್ದ ಸಮಾವೇಶದಲ್ಲಿ ತ್ಯಾಗಿ ಪರ ಘೋಷಣೆಗಳನ್ನು ಕೂಗಿದು, ಶ್ರೀಕಾಂತ್‌ ತ್ಯಾಗಿ ತಮ್ಮ ಪಕ್ಷದ ಸದಸ್ಯರಲ್ಲ ಎಂದು ಹೇಳಿದ್ದ ಸ್ಥಳೀಯ ಬಿಜೆಪಿ ಸಂಸದ ಮಹೇಶ್ ಶರ್ಮಾ ಅವರನ್ನು ಖಂಡಿಸಿದ್ದಾರೆ.

ಈ ನಡುವೆ, ಘಟನೆ ನಡೆದ ಗ್ರಾಂಡ್ ಓಮ್ಯಾಕ್ಸ್ ಸೊಸೈಟಿಯ ನಿವಾಸಿಗಳು ಪೋಸ್ಟರ್‌ಗಳನ್ನು ಹಿಡಿದು  ಮೌನ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.

ತ್ಯಾಗಿ ಪರವಾಗಿ ನಡೆದ ಸಮಾವೇಶದಲ್ಲಿ ತ್ಯಾಗಿ ಸಮುದಾಯದ ಅಭಿಮಾನಗಳನ್ನು ಎತ್ತಿಹಿಡಿಯುವ ಪೋಸ್ಟರ್‌ಗಳನ್ನ್ನು ಪ್ರದರ್ಶಿಸಲಾಗಿದ್ದು, ತ್ಯಾಗಿ ಸಮುದಾಯದವರ ವಿರುದ್ಧ "ಅನ್ಯಾಯ ಮತ್ತು ದಬ್ಬಾಳಿಕೆ" ವಿರುದ್ಧ ಐಕ್ಯ ಹೋರಾಟಕ್ಕೆ ಕರೆ ನೀಡಿದ್ದಾರೆ.

ಮಹಿಳೆಗೆ ಥಳಿಸುವ ವಿಡಿಯೋ ವೈರಲ್ ಆದ ನಂತರ ಮೀರತ್‌ನಿಂದ ತ್ಯಾಗಿಯನ್ನು ಬಂಧಿಸಲಾಗಿತ್ತು. ಆತ ತನ್ನನ್ನು ತಾನು ಬಿಜೆಪಿ ಕಿಸಾನ್ ಮೋರ್ಚಾದ ಸದಸ್ಯ ಎಂದು ಹೇಳಿಕೊಂಡಿದ್ದರಾದರೂ, ಬಿಜೆಪಿ ಆತನಿಗೂ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲವೆಂದು ಹೇಳಿದೆ. ಆತ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಬಿಜೆಪಿಯ ಉನ್ನತ ನಾಯಕರೊಂದಿಗೆ ಫೋಟೋಗೆ ಜೊತೆ ನಿಂತಿರುವುದು ಕಂಡುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News