×
Ad

ಉತ್ತರಪ್ರದೇಶ: ದಲಿತ ಯುವಕನಿಗೆ ಚಪ್ಪಲಿಯಿಂದ ಹೊಡೆದ ಗ್ರಾಮದ ಮುಖ್ಯಸ್ಥ

Update: 2022-08-21 15:41 IST
Photo: Twitter Video Grab

ಮುಝಫ್ಫರ್‌ನಗರ,ಆ.21: ದಲಿತ ಯುವಕನೋರ್ವನನ್ನು ಚಪ್ಪಲಿಗಳಿಂದ ಥಳಿಸಿದ್ದಕ್ಕಾಗಿ ಇಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಯ ವೀಡಿಯೊ ಇಂಟರ್ನೆಟ್‌ನಲ್ಲಿ ವೈರಲ್ ಆಗಿತ್ತು.

ಮುಝಫ್ಫರ್‌ನಗರ ಜಿಲ್ಲೆಯ  ತಾಜ್‌ಪುರ  ಗ್ರಾಮದ ಮುಖ್ಯಸ್ಥ ಶಕ್ತಿಮೋಹನ ಗುರ್ಜರ್ ಮತ್ತು ರೇತಾ ನಾಗ್ಲಾ ಗ್ರಾಮದ ಮಾಜಿ ಮುಖ್ಯಸ್ಥ ಗಜೇ ಸಿಂಗ್ ಅವರು ದಲಿತ ಯುವಕ ದಿನೇಶ ಕುಮಾರ (27)ನನ್ನು ಚಪ್ಪಲಿಗಳಿಂದ ಥಳಿಸಿದ್ದಾರೆ ಮತ್ತು ಜೀವ ಬೆದರಿಕೆಯನ್ನೂ ಒಡ್ಡಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಇಬ್ಬರೂ ಆರೋಪಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಶಕ್ತಿ ಮೋಹನನನ್ನು ಬಂಧಿಸಿದ್ದಾರೆ. ತಲೆ ಮರೆಸಿಕೊಂಡಿರುವ ಗಜೇ ಸಿಂಗ್‌ಗಾಗಿ  ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

  ಘಟನೆಯನ್ನು ವಿರೋಧಿಸಿ ಛಾಪರ್ ಪೊಲೀಸ್ ಠಾಣೆಯ ಎದುರು ಧರಣಿಯನ್ನು ನಡೆಸಿದ ಭೀಮ್ ಆರ್ಮಿ ಕಾರ್ಯಕರ್ತರು ಮತ್ತು ದಲಿತ ಸಮುದಾಯದ ಸದಸ್ಯರು ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.ಪೊಲೀಸರು ಪ್ರದೇಶದಲ್ಲಿ ಬಿಗು ಭದ್ರತೆಯನ್ನು ಏರ್ಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News