ಅಸ್ಸಾಂಗೆ ಆಗಮಿಸುವ ʼಇಮಾಂʼಗಳು ಮೊದಲೇ ಪೊಲೀಸರಿಗೆ ತಿಳಿಸಿ, ನೋಂದಾಯಿಸಬೇಕು: ಸಿಎಂ ಹಿಮಂತ ಬಿಸ್ವ ಶರ್ಮ

Update: 2022-08-22 15:16 GMT

ಗುವಾಹಟಿ: ಇತರ ರಾಜ್ಯಗಳಿಂದ ಬರುವ ಇಮಾಮ್‌ಗಳು(imam) ಅಥವಾ ಇಸ್ಲಾಮಿಕ್ ಧರ್ಮಗುರುಗಳು ಸ್ಥಳೀಯ ಪೊಲೀಸರಿಗೆ(Police) ಮಾಹಿತಿ ನೀಡಿ ಸರ್ಕಾರಿ ಪೋರ್ಟಲ್‌ನಲ್ಲಿ(Government  ನೋಂದಾಯಿಸಿಕೊಳ್ಳಬೇಕು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸೋಮವಾರ ಹೇಳಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

"ನಾವು ಕೆಲವು SOP [Standard Operating Procedure]ಗಳನ್ನು ಮಾಡಿದ್ದೇವೆ. ನಿಮ್ಮ ಗ್ರಾಮಕ್ಕೆ ಯಾವುದೇ ಇಮಾಮ್ ಬಂದರೆ ಮತ್ತು ನಿಮಗೆ ಆ ವ್ಯಕ್ತಿಯನ್ನು ತಿಳಿದಿಲ್ಲದಿದ್ದರೆ, ತಕ್ಷಣವೇ ಪೊಲೀಸ್ ಠಾಣೆಗೆ ತಿಳಿಸಿ. ಅವರು ಪರಿಶೀಲಿಸುತ್ತಾರೆ, ನಂತರ ಮಾತ್ರ ಅವರು ಉಳಿದುಕೊಳ್ಳಬಹುದಾಗಿದೆ," ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಸುದ್ದಿಗಾರರಿಗೆ ತಿಳಿಸಿದರು. "ಅಸ್ಸಾಂನ ಮುಸ್ಲಿಂ ಸಮುದಾಯವು ಈ ಕೆಲಸದಲ್ಲಿ ನಮಗೆ ಸಹಾಯ ಮಾಡುತ್ತಿದೆ" ಎಂದೂ ಅವರು ಹೇಳಿಕೆ ನೀಡಿದ್ದಾರೆ.

ಅಸ್ಸಾಂನ ಹೊರಗಿನಿಂದ ಮದರಸಾಗಳಿಗೆ ಸೇರುವ ಧರ್ಮಗುರುಗಳು ಮತ್ತು ಇತರ ವ್ಯಕ್ತಿಗಳ ವಿವರಗಳನ್ನು ದಾಖಲಿಸಲು ರಾಜ್ಯ ಸರ್ಕಾರ ಪೋರ್ಟಲ್ ಅನ್ನು ಸ್ಥಾಪಿಸುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು.

"ಅಸ್ಸಾಂನಿಂದ ಬಂದವರು, ಆ ಪೋರ್ಟಲ್‌ನಲ್ಲಿ ತಮ್ಮ ಹೆಸರನ್ನು ನೋಂದಾಯಿಸುವ ಅಗತ್ಯವಿಲ್ಲ, ಹೊರಗಿನ ಜನರು ಪೋರ್ಟಲ್‌ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು" ಎಂದು ಶರ್ಮಾ ಹೇಳಿದರು.

ಅಸ್ಸಾಂನಲ್ಲಿ ಭಯೋತ್ಪಾದಕ ಸಂಘಟನೆ ಅಲ್-ಖೈದಾ(Al-Qaida) ಅಥವಾ AQIS ನೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ರಾಜ್ಯದ ಗೋಲ್ಪಾರಾ ಜಿಲ್ಲೆಯಿಂದ ಇಬ್ಬರು ಧರ್ಮಗುರುಗಳನ್ನು ಶನಿವಾರ ಬಂಧಿಸಿದ ನಂತರ ಈ ಬೆಳವಣಿಗೆ ನಡೆದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News