'ಇವೆಲ್ಲವೂ ಸತ್ಯಕ್ಕೆ ದೂರವಾದ ಆರೋಪ': ಅನಿರುದ್ಧರನ್ನು ಕಿರುತೆರೆಯಿಂದ ದೂರವಿಟ್ಟಿದ್ದಕ್ಕೆ ಅಭಿಮಾನಿಗಳಿಂದ ಖಂಡನೆ

Update: 2022-08-23 13:48 GMT
(ನಟ ಅನಿರುದ್ಧ)

ಬೆಂಗಳೂರು, ಆ.23: ನಟ ಅನಿರುದ್ಧ ಅವರನ್ನು ಎರಡು ವರ್ಷಗಳ ಕಾಲ ಕಿರುತೆರೆಯಿಂದ ದೂರ ಇಟ್ಟಿರುವ ಕ್ರಮಕ್ಕೆ ಅವರ ಅಭಿಮಾನಿಗಳು, ನಿರ್ಮಾಪಕರ ಸಂಘದ ಅಧ್ಯಕ್ಷ ಭಾಸ್ಕರ್ ರಾವ್ ಮತ್ತು ಜೊತೆ ಜೊತೆಯಲಿ ಧಾರಾವಾಹಿ ನಿರ್ದೇಶಕ ಆರೂರು ಜಗದೀಶ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಪ್ರೆಸ್‍ಕ್ಲಬ್‍ನಲ್ಲಿ ಮಾತನಾಡಿದ ಅನಿರುದ್ಧ್ ಅಭಿಮಾನಿ ಮತ್ತು ವಕೀಲೆ ವೀಣಾ ಮಹೇಶ್, ನಾವು ಅನಿರುದ್ಧ ಅವರನ್ನು ತೆರೆಯ ಮೇಲೆ ಅಷ್ಟೇ ಅಲ್ಲದೆ ನಿಜ ಜೀವನದಲ್ಲೂ ತುಂಬಾ ಹತ್ತಿರದಿಂದ ನೋಡಿ ತಿಳಿದಿದ್ದೇವೆ. ಅವರು ಯಾರೊಂದಿಗೂ ದುರಹಂಕಾರದಿಂದ ವರ್ತಿಸಿಲ್ಲ. ಹಾಗೆಯೇ ಯಾರಿಗೂ ಮೋಸ ಮಾಡಲಿಲ್ಲ ಎಂದರು.

ನಿರ್ದೇಶಕರು ಅನಿರುದ್ಧ ಅವರ ಮೇಲೆ ಸರಿಯಾದ ಸಮಯಕ್ಕೆ ಶೂಟಿಂಗ್‍ಗೆ ಬರುವುದಿಲ್ಲ. ಚಿತ್ರೀಕರಣ ಸಮಯದಲ್ಲಿ ತಂಡದ ಜೊತೆಗೆ ಸರಿಯಾಗಿ ವರ್ತಿಸುವುದಿಲ್ಲ. ಧಾರಾವಾಹಿಯಲ್ಲಿ ನಾಯಕಿ ಬದಲಾಗಲು ಇವರೇ ಕಾರಣ ಎಂದೆಲ್ಲ ದೂರಿದ್ದಾರೆ. ಆದರೆ ಇವೆಲ್ಲವೂ ಸತ್ಯಕ್ಕೆ ದೂರವಾದ ಆರೋಪಗಳು ಎಂದು ತಿಳಿಸಿದರು.

ಅನಿರುದ್ಧ ಕೇವಲ ನಟ ಮಾತ್ರವಲ್ಲ, ನಿಜ ಜೀವನದಲ್ಲೂ ಸಮಾಜ ಸೇವಕರಾಗಿದ್ದಾರೆ. ಕೋವಿಡ್ ಸಮಯದಲ್ಲಿ ಅನೇಕ ಕುಟುಂಬಗಳಿಗೆ ಸಹಾಯ ಹಸ್ತ ನೀಡಿದ್ದಾರೆ ಎಂದು ಅವರು ನೆನಪಿಸಿಕೊಂಡರು.

ಪತ್ರಿಕಾಗೋಷ್ಠಿಯಲ್ಲಿ ಇಂದಿರಾ, ಸ್ಮಿತಾ, ಸಂಗೀತ, ರಮಾದೇವಿ, ಪಾವನಿ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News