ಆ.27: ಬಿ.ವಿ. ಕಕ್ಕಿಲ್ಲಾಯ ಪ್ರೇರಿತ ಉಪನ್ಯಾಸ
Update: 2022-08-23 19:35 IST
ಮಂಗಳೂರು : ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಕರ್ನಾಟಕ ಏಕೀಕರಣ ಚಳುವಳಿಯ ನಾಯಕ, ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ಮುಖಂಡ, ರಾಜ್ಯಸಭಾ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ, ಸಿಪಿಐ ಹಿರಿಯ ಮುಖಂಡ ಬಿ.ವಿ. ಕಕ್ಕಿಲ್ಲಾಯ (1919-2012) ಅವರ ಗೌರವಾರ್ಥ ದೇಶದ ಜ್ವಲಂತ ಸಮಸ್ಯೆಗಳ ಬಗ್ಗೆ ಪರ್ಯಾಯ ಚಿಂತನೆ ಮತ್ತು ಮಾರ್ಗೋಪಾಯ ಕಂಡುಕೊಳ್ಳುವ ಉದ್ದೇಶದಿಂದ ಉಪನ್ಯಾಸ ಕಾರ್ಯಕ್ರಮವು ಆ.27ರಂದು ಸಂಜೆ 4.30ಕ್ಕೆ ಬಲ್ಮಠ ಸಹೋದಯದ ಜತ್ತನ್ನ ಸಭಾಂಗಣದಲ್ಲಿ ನಡೆಯಲಿದೆ.
ಬೆಂಗಳೂರಿನ ಹೊಸತು ಮಾಸಿಕ ಹಾಗೂ ಎಂಎಸ್ ಕೃಷ್ಣನ್ ಟ್ರಸ್ಟ್ ಮತ್ತು ಮಂಗಳೂರಿನ ಸಮದರ್ಶಿ ವೇದಿಕೆ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಹಿರಿಯ ಲೇಖಕ ಹಾಗೂ ರಾಜಕೀಯ ವಿಮರ್ಶಕ ಪ್ರೊ.ಅಪೂರ್ವಾನಂದ ‘ಇಂದಿನ ಸಾಮಾಜಿಕ ವಿದ್ಯಮಾನಗಳ ಆಂತರ್ಯ’ ಎಂಬ ವಿಷಯದಲ್ಲಿ ಉಪನ್ಯಾಸ ನೀಡಲಿದ್ದಾರೆ ಎಂದು ಡಾ.ಶ್ರೀನಿವಾಸ ಕಕ್ಕಿಲ್ಲಾಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.